News Karnataka Kannada
Thursday, April 18 2024
Cricket
ಕಾಸರಗೋಡು

ಕುಬಣೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಅಗ್ನಿ ಅವಘಡ

ಉಪ್ಪಳ ಸಮೀಪದ ಕುಬಣೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬುಧವಾರ ಸಂಜೆ ಮತ್ತೆ ಅಗ್ನಿ ಅನಾಹುತ ಉಂಟಾಗಿದ್ದು, ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.
Photo Credit : By Author

ಕಾಸರಗೋಡು: ಉಪ್ಪಳ ಸಮೀಪದ ಕುಬಣೂರು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬುಧವಾರ ಸಂಜೆ ಮತ್ತೆ ಅಗ್ನಿ ಅನಾಹುತ ಉಂಟಾಗಿದ್ದು, ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ವಾರದ ಅವಧಿಯಲ್ಲಿ ಎರಡನೇ ಭಾರೀ ಅಗ್ನಿ ಅನಾಹುತ ಉಂಟಾಗಿದೆ. ಉಪ್ಪಳ ಹಾಗೂ ಕಾಸರಗೋಡಿನಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಂಟೆಗಳ ಕಾಲ ಹರಸಾಹಸ ದಿಂದ ಬೆಂಕಿಯನ್ನು ನಂದಿಸಿದರು. ಉಪ್ಪಳ ಪೇಟೆಯನ್ನು ಒಳಗೊಂಡ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ತ್ಯಾಜ್ಯ ವನ್ನು ಕಳೆದ ಹಲವು ವರ್ಷಗಳಿಂದ ಕುಬಣೂರುನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ತಂದು ಹಾಕಲಾಗುತ್ತಿದೆ.

ಈ ಘಟಕದ ಸುತ್ತಮುತ್ತ ಹಾಕಲಾಗಿರುವ ತ್ಯಾಜ್ಯ ಅಗ್ನಿ ಅನುಹುತಕ್ಕೆ ಒಳಗಾಗುತ್ತಿದ್ದು ಪರಿಸರ ವಾಸಿಗಳು ದುರ್ನಾತ ಹಾಗೂ ಹೊಗೆಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು