ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ರಿಷಬ್ ಶೆಟ್ಟಿ ದೀಪಾವಳಿಯನ್ನು ಫ್ಯಾಮಿಲಿ ಜೊತೆ ಆಚರಿಸಿದ್ರು. ಟ್ರೆಡಿಷನಲ್ ಲುಕ್ನಲ್ಲಿ ರಿಷಬ್ ಫ್ಯಾಮಿಲಿ ಮಿಂಚಿದ್ದಾರೆ. ಶೂಟಿಂಗ್ ಬ್ಯುಸಿ ನಡುವೆ ಕಾಂತಾರ ನಟ ಫ್ಯಾಮಿಲಿ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಮಕ್ಕಳ ಜೊತೆ ಬೆಳಕಿನ ಹಬ್ಬ ಆಚರಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ನಾಡಿನ ಜನತೆಗೆ ಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಫೋಟೋಸ್ ನೋಡಿದ ನೆಟ್ಟಿಗರು ರಿಷಬ್ ಶೆಟ್ಟಿ ಅವರಿಗೆ ಹ್ಯಾಪಿ ದೀಪಾವಳಿ, ಸಂಪ್ರದಾಯ ಅಂದ್ರೆ ಹೀಗಿರಬೇಕು ಶೆಟ್ರೆ, ಬ್ಯೂಟಿಫುಲ್ ಫ್ಯಾಮಿಲಿ ಅಂತೆಲ್ಲಾ ಕಾಮೆಂಟ್ ಹಾಕುವುದರ ಜೊತೆಗೆ ಕಾಂತರಾ 2 ಯಾವಾಗ ಬರುತ್ತೆ ಎಂದು ಕೇಳುತ್ತಿದ್ದಾರೆ.
ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಮಕ್ಕಳ ಜೊತೆ ಬೆಳಕಿನ ಹಬ್ಬ ಆಚರಿಸಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.