Bengaluru 27°C
Ad

ಬರ್ತಿದೆ ‘ಒಂದು ಮೊಟ್ಟೆಯ ಕಥೆ’ ಟೀಮ್ ಜೊತೆ ರಾಜ್ ಬಿ. ಶೆಟ್ಟಿ ಹೊಸ ‘ರೂಪಾಂತರ’

Roopantara

ನಟ ರಾಜ್​ ಬಿ. ಶೆಟ್ಟಿ ಅವರು ‘ಒಂದು ಮೊಟ್ಟೆಯ ಕಥೆ’ ತಂಡದ ಜೊತೆ ಸೇರಿ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಮಲಯಾಳಂನ ‘ಟರ್ಬೋ’ ಸಿನಿಮಾದಲ್ಲಿ ಖಳನಾಯಕನಾಗಿ ರಾಜ್ ಬಿ. ಶೆಟ್ಟಿ ಅವರು ಮಿಂಚಿದ್ದರು. ಈಗ ಅವರ ಹೊಸ ಸಿನಿಮಾ ‘ರೂಪಾಂತರ’ ಘೋಷಣೆ ಆಗಿದೆ. ಇದರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಅನಾವರಣ ಮಾಡಲಾಗಿದೆ.

‘ರೂಪಾಂತರ’ ಸಿನಿಮಾದ ಬಗ್ಗೆ ರಾಜ್​ ಬಿ. ಶೆಟ್ಟಿ ಅವರು ಈ ರೀತಿ ಪೋಸ್ಟ್​ ಮಾಡಿದ್ದಾರೆ. ‘ಕೆಲ ಸಿನಿಮಾಗಳು ಮನಸ್ಸಿಗೆ ಬಲು ಹತ್ತಿರ. ಅಂತಹ ಒಂದು ಸುಂದರ ಚಿತ್ರ ರೂಪಾಂತರ. ಈ ಸಿನಿಮಾದ ಭಾಗ ಆಗಿರುವುದರ ಜೊತೆಗೆ ಈ ಚಿತ್ರವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಜವಾಬ್ದಾರಿ ನನಗೆ ಲಭಿಸಿರುವುದು ನನ್ನ ವೃತ್ತಿಜೀವನದ ಭಾಗ್ಯ. ರೂಪಾಂತರದ ಪೋಸ್ಟರ್ ಈಗ ನಿಮ್ಮ ಮುಂದೆ. ಸದ್ಯದಲ್ಲೇ ಚಿತ್ರವೂ ನಿಮ್ಮ ಮುಂದೆ ಬರಲಿದೆ. ಎಂದಿನಂತೆ ಜೊತೆಗಿರಿ’ ಎಂದು ಅವರು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಹೊಸತನ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮಿಥಿಲೇಶ್ ಎಡವಲತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ರಾಜ್ ಬಿ. ಶೆಟ್ಟಿ ಜೊತೆ ಸೋಮಶೇಖರ್ ಬೋಲೇಗಾಂವ್, ಹನುಮಕ್ಕ, ಲೇಖಾ ನಾಯ್ಡು, ಅಂಜನ್ ಭಾರಧ್ವಾಜ್, ಭರತ್ ಜಿ.ಬಿ. ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Ad
Ad
Nk Channel Final 21 09 2023
Ad