News Karnataka Kannada
Monday, April 29 2024
ಸಾಂಡಲ್ ವುಡ್

ಅಪ್ಪು ಬರ್ತ್‍ಡೇಗೆ ಮರು ಬಿಡುಗಡೆಯಾಗ್ತಿದೆ ಈ ಚಿತ್ರ

ಪುನೀತ್ ರಾಜ್​ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ ಪವರ್ ಸ್ಟಾರ್  ದಿ. ಪುನೀತ್ ರಾಜ್ ಕುಮಾರ್ ಜನ್ಮದಿನ. ಪ್ರತಿ ಬಾರಿ ಅವರ ಜನ್ಮದಿನಕ್ಕೆ ಒಂದು ವಿಶೇಷತೆ ಇರುತ್ತದೆ. ಅದರಂತೆ ಈ ಬಾರಿ ಅವರ ನಟನೆಯ ಜಾಕಿ ಸಿನೆಮಾ ರೀ-ರಿಲೀಸ್ ಆಗುತ್ತಿದೆ.
Photo Credit : News Kannada

ಬೆಂಗಳೂರು: ಪುನೀತ್ ರಾಜ್​ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ ಪವರ್ ಸ್ಟಾರ್  ದಿ. ಪುನೀತ್ ರಾಜ್ ಕುಮಾರ್ ಜನ್ಮದಿನ. ಪ್ರತಿ ಬಾರಿ ಅವರ ಜನ್ಮದಿನಕ್ಕೆ ಒಂದು ವಿಶೇಷತೆ ಇರುತ್ತದೆ. ಅದರಂತೆ ಈ ಬಾರಿ ಅವರ ನಟನೆಯ ಜಾಕಿ ಸಿನೆಮಾ ರೀ-ರಿಲೀಸ್ ಆಗುತ್ತಿದೆ.

ದುನಿಯಾ ಸೂರಿ ನಿರ್ದೇಶನದ ಜಾಕಿ 2010ರಲ್ಲಿ ರಿಲೀಸ್ ಆಗಿತ್ತು. ಪಾರ್ವತಮ್ಮ ರಾಜ್​ಕುಮಾರ್ ಅವರು ನಿರ್ಮಾಣ ಹಾಗೂ ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನೆಮಾದಲ್ಲಿ ಅಪ್ಪು ಹಾಗೂ ಭಾವನಾ ಜೋಡಿ ಸಖತ್ ಮೋಡಿ ಮಾಡಿತ್ತು. ಇದೀಗ ಮತ್ತೊಮ್ಮೆ ಮನರಂಜಿಸಲು 4K ರೀ ಮಾಸ್ಟರ್ಡ್ ವರ್ಷನ್​ನಲ್ಲಿ ಈ ಸಿನೆಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಸದ್ಯ ‘ಜಾಕಿ’ ಚಿತ್ರವನ್ನು ಅಪ್​​ಗ್ರೇಡ್ ಮಾಡುವ ಕೆಲಸ ನಡೆಯುತ್ತಿದ್ದು, ಮಾಸ್ಟರ್ಡ್ ವರ್ಷನ್​ನಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ಪುನೀತ್ ರಾಜ್​ಕುಮಾರ್ 2021ರ ಅಕ್ಟೋಬರ್​ನಲ್ಲಿ ವಿಧಿವಶರಾದರು. 2022ರ ಮಾರ್ಚ್​ 17ರಂದು ಅವರು ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ‘ಜೇಮ್ಸ್’ ರಿಲೀಸ್ ಆಯಿತು. ಈಗ 2024ರಲ್ಲಿ ‘ಜಾಕಿ’ ಚಿತ್ರ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು