News Karnataka Kannada
Monday, April 29 2024
ವಿಡಿಯೊ

ಶ್ವಾನಕ್ಕೆ ತೊಂದರೆ ಕೊಟ್ಟ ವ್ಯಕಿಗೆ ತಕ್ಕ ಪಾಠ ಕಲಿಸಿದ ಗೋಮಾತೆ; ವಿಡಿಯೋ ವೈರಲ್‌

ಈಗಂತು ಮೂಖ ಪ್ರಾಣಿಗಳಿಗೆ ತೊಂದರೆ ಕೊಡುವುದು ಮಾನವರಿಗೆ ಆಟವಾಗಿ ಬಿಟ್ಟಿದೆ. ಆದರೆ ಪ್ರಾಣಿಗಳ ಗುಣ ಮನುಷ್ಯನಲ್ಲಿ ಕಾಣ ಸಿಗುವುದು ಕಡಿಮೆ.
Photo Credit : Twitter

ಈಗಂತು ಮೂಕ  ಪ್ರಾಣಿಗಳಿಗೆ ತೊಂದರೆ ಕೊಡುವುದು ಮಾನವರಿಗೆ ಆಟವಾಗಿ ಬಿಟ್ಟಿದೆ. ಆದರೆ ಪ್ರಾಣಿಗಳ ಗುಣ ಮನುಷ್ಯನಲ್ಲಿ ಕಾಣ ಸಿಗುವುದು ಕಡಿಮೆ.  ಸ್ನೇಹದಲ್ಲಿ ಮನುಷ್ಯನಿಗಿಂತ ಪ್ರಾಣಿಗಳೇ ಹೆಚ್ಚು ನಿಯತ್ತಿನಿಂದ ಇರುತ್ತವೆ ಹಾಗೂ ಇದಕ್ಕೆ ಬಹಳಷ್ಟು ನಿದರ್ಶನಗಳು ಕೂಡ ಇವೆ. ಸದ್ಯ ಇಂತಹದ್ದೆ ಒಂದು ಘಟನೆ ನಡೆದಿದ್ದುಇಲ್ಲಿ ಒಬ್ಬ ವ್ಯಕ್ತಿ ಅನಾವಶ್ಯಕವಾಗಿ ಒಂದು ಶ್ವಾನಕ್ಕೆ ಹಿಂಸಿಸುತ್ತಿದ್ದನ್ನು ಕಂಡ ಹಸು ಆ ವ್ಯಕಿಗೆ ಒದ್ದು,ತುಳಿದು ಸರಿಯಾಗಿ ಪಾಠ ಕಲಿಸಿದೆ. ಇದೀಗ ಈ ವಿಡಿಯೋ ಎಲ್ಲೆಡೆ ಸಖತ್‌ ವೈರಲ್‌ ಆಗಿದೆ.

ಪ್ರಾಣಿಗಳನ್ನು ಕೊಂದರು ಹಿಂಸಿಸಿದರು ಅವುಗಳು ಹೇಳುವುದಿಲ್ಲ ಹಾಗೂ ಅದನ್ನು ಕೇಳುವವರು ಇರುವುದಿಲ್ಲ ಎಂದು ತಿಳಿದ ಕೆಲ ಕಟುಕರು ಅದಕ್ಕೆ ಹಿಂಸಿಸುತ್ತಾರೆ. ಇಂತಹ ಬಹಳಷ್ಟು ಉದಾಹರಣೆಗಳನ್ನು ನೀವು ನೋಡಿರುತ್ತೀರಿ. ಆದರೆ ಕೆಲವರು ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಇನ್ನೂ ಕೆಲವು ಬೀದಿ ಪಾಲಾಗಿ ಕಟುಕರ ಹಿಂಸೆಗೆ ಒಳಗಾಗುತ್ತವೆ. ಮಾನವರ ಸ್ನೇಹಕ್ಕಿಂತ ಪ್ರಾಣಿಗಳ ಸ್ನೇಹ ಬಯಸುವುದು ಎಷ್ಟೋ ಲೇಸು ಏಕೆಂದರೆ ಅವು ಎಂದಿಗೂ ನಿಮಗೆ ದ್ರೋಹ ಬಗೆಯುವುದಿಲ್ಲ.

ಹೌದು ಮೂಕ  ಪ್ರಾಣಿಗಳಿಗೆ ನಮ್ಮಂತೆ ಮಾತು ಬಾರದಿರಬಹುದು, ಆದರೆ ಅವುಗಳು ನಮ್ಮ ಭಾವನೆಗಳನ್ನು ಅರ್ಥೈಸುತ್ತವೆ, ಕಷ್ಟಗಳಿಗೆ ಸ್ಪಂದಿಸುತ್ತವೆ. ಇದಕ್ಕೆ ನಿದರ್ಶನದಂತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತಿರುತ್ತವೆ. ಅದಕ್ಕೆ ಈ ವೀಡಿಯೊ ಕೂಡ ಒಂದು ಉದಾಹರಣೆ. ನಮ್ಮ ಸ್ನೇಹಿತರಿಗೆ ಯಾರಾದರು ತೊಂದರೆ ಕೊಟ್ಟರೆ ಹೇಗೆ ನಾವು ಒಡೋಡಿ ಹೋಗಿ ಬಚಾವ್‌ ಮಾಡುತ್ತೇವೊ ಅದೇ ರೀತಿ ಇಲ್ಲಿ ಗೋಮಾತೆ ತನ್ನ ಸ್ನೇಹಿತನನ್ನು ಕಟುಕನಿಂದ ಕಾಪಾಡಿ ಅವನಿಗೆ ತಕ್ಕ ಶಾಸ್ತಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಸ್ನೇಹಿತನ ಸಹಾಯಕ್ಕಾಗಿ ಧಾವಿಸಿದ ಹಸುವಿನ ಸಹಾಯ ಮನೋಭಾವವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಈ ಘಟನೆ ಕೆಲ ವರ್ಷಗಳ ಹಿಂದೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ. ವೈರಲ್ ವಿಡಿಯೋವನ್ನು @leonskee ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು