ಮುಂಬೈ: ಆಮೀರ್ ಪುತ್ರಿ ಇರಾ ಖಾನ್ ತಮ್ಮ ಹಲವು ವರ್ಷಗಳ ಬಾಯ್ಫ್ರೆಂಡ್ ನೂಪುರ್ರನ್ನು ಜನವರಿ 3ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಮದುವೆಯಲ್ಲಿ ಮದುಮಗ ನೂಪುರ್ ಧರಿಸಿದ ಬಟ್ಟೆಯ ಕುರಿತು ಚರ್ಚೆ ಶುರುವಾಗಿದೆ.
ಹೌದು. . ಅದೇನು ಬಹಳ ಚೆನ್ನಾಗಿತ್ತೆಂದಲ್ಲ, ಬದಲಿಗೆ ವಿಚಿತ್ರವಾಗಿತ್ತು ಎಂಬ ಕಾರಣಕ್ಕೆ. ಆಮೀರ್ ಖಾನ್ ಕುಟುಂಬವಷ್ಟೇ ಅಲ್ಲ, ಅಂಬಾನಿ ಕುಟುಂಬವೂ ಭಾಗವಹಿಸಿದ್ದಂತ ವಿವಾಹ ಸಮಾರಂಭದಲ್ಲಿ ಆಮೀರ್ ಅಳಿಯ ಯಾರಿಗೂ ಕೇರ್ ಮಾಡದೆ ಚಡ್ಡಿ ಬನಿಯನ್ ಧರಿಸಿ ವಿವಾಹ ನೋಂದಣಿ ಕಾರ್ಯ ಪೂರೈಸಿದ್ದು ಸುದ್ದಿಯಾಗಿದೆ.
ಅಲ್ಲಾ ಸ್ವಾಮಿ, ಅಷ್ಟೊಂದು ಹೆಸರು ಮಾಡಿದ ನಟನ ಪುತ್ರಿಯನ್ನು ವಿವಾಹವಾಗುವುದೆಂದ ಮೇಲೆ ದೊಡ್ಡ ದೊಡ್ಡ ವಿನ್ಯಾಸಕರು ತಯಾರಿಸಿದ ಶೇರ್ವಾನಿಯೋ, ಸೂಟೋ ಧರಿಸುವುದು ಬಿಟ್ಟು, ಇದೇನಿದು ಚಡ್ಡಿ ಬನಿಯನ್ನು? ಹೋಗಲಿ, ಸಿಂಪಲ್ ಆಗಿ ಒಂದು ಶರ್ಟ್ ಆದರೂ ಹಾಕಿಕೊಳ್ಳಲಾಗುತ್ತಿರಲಿಲ್ಲವೇ ಎನ್ನುತ್ತಿದ್ದಾರೆ ನೆಟಿಜನ್ಸ್.
ವಿವಾಹಕ್ಕೆ ಇರಾ ಲೆಹೆಂಗಾ ಹಾಕಿ ಅದ್ದೂರಿಯಾಗಿ ಸಜ್ಜಾಗಿದ್ದರು. ಆಮೀರ್, ಆತನ ಪತ್ನಿಯರು ಎಲ್ಲರೂ ಮಿರಿಮಿರಿ ಮಿಂಚುತ್ತಿದ್ದರು. ಆದರೆ, ಮದುವೆ ವರ ಮಾತ್ರ ಕಪ್ಪು ಬನಿಯನ್, ಬಿಳಿ ಚಡ್ಡಿ ಧರಿಸಿದ್ದಿದು ಬಹಳ ವಿಚಿತ್ರವಾಗಿತ್ತು. ಈ ಸಂಬಂಧ ವಿಡಿಯೋ ವೈರಲ್ ಆದ ಕೂಡಲೇ ನೆಟಿಜನ್ಗಳು ಕಾಮೆಂಟ್ಗಳ ವಿಭಾಗದಲ್ಲಿ ಹರಿಹಾಯ್ದಿದ್ದಾರೆ. ‘ಒಬ್ಬ ವರನು ಅಂತಹ ಶೈಲಿಯಲ್ಲಿ ಧರಿಸಿರುವುದು ತುಂಬಾ ಮುಜುಗರದ ಸಂಗತಿ’ ಎಂದು ಓರ್ವ ಬಳಕೆದಾರರು ಹೇಳಿದ್ದರೆ, ‘ಈತ ಮದುವೆಯಾಗಲು ಬಂದಿದ್ದನೋ, ಜಿಮ್ನಲ್ಲಿ ವರ್ಕೌಟ್ ಮಾಡಲು ಬಂದಿದ್ದನೋ’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
‘ಆಮೀರ್ ತಮ್ಮ ಅಳಿಯನಿಗೆ ಹೊಸ ಬಟ್ಟೆ ಕೊಡಿಸಲಿಲ್ಲವೇ’ ಎಂದು ಇನ್ನೊಬ್ಬ ನೆಟ್ಟಿಗರು ಕೇಳಿದ್ದಾರೆ. ಅಮೀರ್ ಖಾನ್ ಮತ್ತು ಚಲನಚಿತ್ರ ನಿರ್ಮಾಪಕಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್, ಮಾನಸಿಕ ಆರೋಗ್ಯ ಬೆಂಬಲ ಸಂಸ್ಥೆಯ ಸಂಸ್ಥಾಪಕಿ ಮತ್ತು ಸಿಇಒ ಆಗಿದ್ದಾರೆ. ಅವರ ಪತಿಯಾದ ನೂಪುರ್ ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರರಾಗಿದ್ದಾರೆ.
https://www.instagram.com/reel/C1pKxsyqRWa/?utm_source=ig_web_copy_link