ಮುಂಬೈ: ನಟ ಶಾರುಖ್ ಖಾನ್ ಅವರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಅವರು ಮಕ್ಕಳು ಬಣ್ಣದ ಲೋಕಕ್ಕೆ ಎಂಟ್ರಿ ನೀಡುವ ಸಮಯ. ಈ ಮೊದಲೇ ಸುದ್ದಿ ಆದಂತೆ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ‘ದಿ ಆರ್ಚೀಸ್́ʼ ಸಿನಿಮಾ ಮೂಲಕ ಅವರು ಬಾಲಿವುಡ್ಗೆ ಎಂಟ್ರಿ ನೀಡುತ್ತಿದ್ದಾರೆ.
ಜೋಯಾ ಅಖ್ತರ್ ನಿರ್ದೇಶನ ಮಾಡಿರುವ ಈ ಸಿನಿಮಾದ ಟ್ರೇಲರ್ ಈಗ ಬಿಡುಗಡೆ ಆಗಿದೆ. ಸಿನಿಮಾ ಕಥೆ ಏನು ಎಂಬುದರ ಬಗ್ಗೆ ಇದರಲ್ಲಿ ಸುಳಿವು ಸಿಕ್ಕಿದೆ. ಸುಹಾನಾ ಖಾನ್ ಅವರ ನಟನೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಡಿಸೆಂಬರ್ 7ರಂದು ನೆಟ್ಫ್ಲಿಕ್ಸ್ ಒಟಿಟಿ ಮೂಲಕ ‘ದಿ ಆರ್ಚೀಸ್’ ಸಿನಿಮಾ ರಿಲೀಸ್ ಆಗಲಿದೆ.
‘ದಿ ಆರ್ಚೀಸ್’ ಸಿನಿಮಾದದಲ್ಲಿ ಶಾರುಖ್ ಖಾನ್ ಪುತ್ರಿ ಸುನಾನಾ ಖಾನ್ ಮಾತ್ರವಲ್ಲದೇ, ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ, ಶ್ರೀದೇವಿಯ ಎರಡನೇ ಮಗಳು ಖುಷಿ ಕಪೂರ್ ಸೇರಿದಂತೆ ಹಲವರು ನಟಿಸಿದ್ದಾರೆ.