ಮುಂಬೈ: ಮುಂದಿನ ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಹಲವಾರು ಸೆಲೆಬ್ರಿಟಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದ್ದಾರೆ. ಈ ವಿಚಾರವಾಗಿ ಹೆಚ್ಚು ಸದ್ದು ಮಾಡಿದವರು ಎಂದರೆ ಬಾಲಿವುಡ್ನ ಹಿರಿಯ ನಟಿ ಮಾಧುರಿ ದೀಕ್ಷಿತ್ ಎಂದೇ ಹೇಳಬಹುದು. ತಮ್ಮ ರಾಜಕೀಯ ಪ್ರವೇಶದ ಕುರಿತು ಮೌನ ಮುರಿದಿರುವ ಧಕ್ ಧಕ್ ಗರ್ಲ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ತಮ್ಮ ನಟನೆಯ ಪಂಚಕ್ ಚಿತ್ರದ ಪ್ರಮೋಶನ್ನಲ್ಲಿ ಬ್ಯುಸಿ ಇರುವ ನಟಿ ರಾಜಕೀಯದ ಪ್ರವೇಶದ ಕುರಿತು ಆಸಕ್ತಿ ಇಲ್ಲ ಎಂದು ಹೇಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ನಟಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸುತ್ತೇನೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ರಾಜಕೀಯ ನನ್ನ ಫ್ಯಾಷನ್ ಅಲ್ಲ ನಾನು ನಟಿಸಿರುವ ಪಂಚಕ್ ಸಿನಿಮಾ ಯಶಸ್ಸು ಕಂಡಲ್ಲಿ ಮತ್ತೊಂದಷ್ಟು ಸಿನಿಮಾಗಳನ್ನು ಮಾಡಲು ನನಗೆ ಪ್ರೇರಣೆ ನೀಡುತ್ತದೆ. ಆದರೆ, ರಾಜಕೀಯ ಪ್ರವೇಶಿಸುವ ಆಲೋಚನೆ ನನ್ನ ತಲೆಯಲ್ಲಿ ಇಲ್ಲ ಎಂದು ಹೇಳಿದ್ದಾರೆ.