News Karnataka Kannada
Friday, May 03 2024
ಮನರಂಜನೆ

ನವದೆಹಲಿ: ತಾಯಿಯ ಜನ್ಮದಿನಕ್ಕೆ ಛಾಯಾಚಿತ್ರ ಹಂಚಿಕೊಂಡು ಶುಭಕೋರಿದ ಅಭಿಷೇಕ್‌

Abhishek Bachchan shares a picture of his mother on her birthday
Photo Credit : IANS

ನವದೆಹಲಿ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಮ್ಮ ತಾಯಿ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಅವರ ಜನ್ಮದಿನದಂದು ಶುಭ ಹಾರೈಸಿದ್ದಾರೆ. ಅಲ್ಲದೆ 2000 ರಲ್ಲಿ ಬಿಡುಗಡೆಯಾದ ಅವರ ಚೊಚ್ಚಲ ಚಿತ್ರ ‘ರೆಫ್ಯೂಜಿ’ ಚಿತ್ರದ ಹಾಡು ಬಿಡುಗಡೆ ಸಮಯದಲ್ಲಿ ತೆಗೆದ ಚಿತ್ರವನ್ನು ಹಂಚಿಕೊಂಡಿದ್ದಾರೆ.

ತಮ್ಮ ತಾಯಿಯ ಸಿನಿಮಾ ಜೀವನ ಕುರಿತು ವಿವರ ಹಂಚಿಕೊಂಡಿದ್ದು, ಏಪ್ರಿಲ್ 9, 1948 ರಂದು ಜನಿಸಿದ್ದು, ಅವರಿಗೀಗ 74 ವರ್ಷ ವಯಸ್ಸು ಎಂದು ವಿವರಿಸಿದ್ದಾರೆ. ಅಲ್ಲದೇ ತಮ್ಮ ತಾಯಿ 15 ನೇ ವಯಸ್ಸಿನಲ್ಲಿ ನಿರ್ಮಾಪಕ ಸತ್ಯಜಿತ್ ರೇ ಅವರೊಂದಿಗೆ ಅವರ ಬಂಗಾಳಿ ಚಲನಚಿತ್ರ ‘ಮಹಾನಗರ’ದಲ್ಲಿ ನಟನೆ ವೃತಿ ಆರಂಭಿಸಿದರು ಎಂದು ವಿವರಿಸಿದ್ದಾರೆ.

ತಾವು ಹಂಚಿಕೊಂಡ ಛಾಯಾಚಿತ್ರ ಮತ್ತು ಅದನ್ನು ತೆಗೆದ ಸಮಯದ ಕುರಿತು ಅಭಿಷೇಕ್ ವಿವರಿಸಿದ್ದು, ಇದು ನಟನಾಗಿ ನನ್ನ ಮೊದಲ ಅಧಿಕೃತ ಸಾರ್ವಜನಿಕ ಸಮಾರಂಭದ ಫೋಟೋ. ನನ್ನ ಮೊದಲ ಚಿತ್ರ ರೆಫ್ಯೂಜಿಯ ಸಂಗೀತ ಬಿಡುಗಡೆ ಸಮಯದಲ್ಲಿ ತೆಗೆದ ಚಿತ್ರ ಎಂದು ವಿವರಿಸಿದ್ದಾರೆ. ಜಯಾ ಬಚ್ಚನ್‌ ಸಂಜೀವ್ ಕುಮಾರ್, ಧರ್ಮೇಂದ್ರ ಮತ್ತು ರಣಧೀರ್ ಕಪೂರ್ ಅವರಂತಹ ಪ್ರತಿಭಾವಂತ ನಟರೊಂದಿಗೆ ತೆರ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು