ನವದೆಹಲಿ: ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ಆರೋಗ್ಯದ ಕುರಿತು ಸುಳ್ಳುವರದಿ ಬಿತ್ತರ ಮಾಡಿದ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್ಗೆ ಅಭಿಷೇಕ್ ದಂಪತಿ ಅರ್ಜಿ ಸಲ್ಲಿಸಿದ್ದು, ಇಂತಹ ಸುಳ್ಳು ವರದಿಗಳನ್ನು ಪ್ರಸಾರಕ್ಕೆ ತಡೆ ನೀಡಬೇಕೆಂದು ಕೋರಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರ ಪುತ್ರಿ ಆರಾಧ್ಯ (11) ಅಪ್ರಾಪ್ತ ವಯಸ್ಸಿನವರಾಗಿದ್ದು, ಇಂತಹ ವಿಡಿಯೋಗಳಿಂದ ಆಕೆಯ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದ ವಿಡಿಯೋ ವರದಿ ಮಾಡುವುದನ್ನು ತಡೆಯಬೇಕೆಂದು ಕೋರಿದ್ದಾರೆ.
ದೆಹಲಿ ಹೈಕೋರ್ಟ್ ಪೀಠವು ಈ ಬಗ್ಗೆ ಗುರುವಾರ ವಿಚಾರಣೆ ನಡೆಸಲಿದೆ. 11ರ ಹರೆಯದ ಆರಾಧ್ಯ ಸಲ್ಲಿಸಿರುವ ಅರ್ಜಿಯಲ್ಲಿ 10 ಸಂಸ್ಥೆಗಳು ತನ್ನ ಕುರಿತಾಗಿ ಹರಿಯಬಿಟ್ಟಿರುವ ಎಲ್ಲಾ ವಿಡಿಯೋಗಳನ್ನು ಡಿ-ಲಿಸ್ಟ್ ಮಾಡಿ ಮತ್ತು ನಿಷ್ಕ್ರಿಯಗೊಳಿಸುವಂತೆ” ಕೇಳಿಕೊಳ್ಳಲಾಗಿದೆ. ಗೂಗಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಕೂಡ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ.