ಶಿಲ್ಲಾಂಗ್: ಶಿಲ್ಲಾಂಗ್ನಲ್ಲಿ ದೇಶದ ಈಶಾನ್ಯ ಭಾಗದ ಅತಿದೊಡ್ಡ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಹೇಳಿದ್ದಾರೆ.
ಇಲ್ಲಿನ ಪೊಲೊ ಮೈದಾನದಲ್ಲಿ ನಡೆಯುತ್ತಿರುವ ಜವಾಹರಲಾಲ್ ನೆಹರು ಕ್ರೀಡಾಂಗಣದ ನವೀಕರಣ, ಮೇಲ್ದರ್ಜೆಗೇರಿಸುವಿಕೆ ಕಾಮಗಾರಿಯನ್ನು ಸಂಗ್ಮಾ ಪರಿಶೀಲಿಸಿದರು. ನವೀಕರಿಸಿದ ಕ್ರೀಡಾಂಗಣವು ನೈಸರ್ಗಿಕ ಹುಲ್ಲಿನ ಟರ್ಫ್ನೊಂದಿಗೆ ಫುಟ್ಬಾಲ್ ಮೈದಾನವನ್ನು ಒಳಗೊಂಡಿರುತ್ತದೆ. ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್ಗಳನ್ನು ಆಯೋಜಿಸಲು ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ.
ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್ಬಾಲ್, ಸ್ಕ್ವಾಷ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ವಾಲಿಬಾಲ್ ಸೇರಿದಂತೆ ವಿವಿಧ ವಿಭಾಗಗಳಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಗಳ ಪ್ರಕಾರ ನವೀಕರಿಸಿದ ಕ್ರೀಡಾಂಗಣವು ಸುಮಾರು 30,000 ಆಸನ ಸಾಮರ್ಥ್ಯವನ್ನು ಹೊಂದಿದ್ದು, ಈ ವರ್ಷ ಡಿಸೆಂಬರ್ಗೆ ಪೂರ್ಣಗೊಳ್ಳಲಿದೆ.