ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಲಿರುವ ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಅಭಿನಯಿಸುವುದರ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು. ಸದ್ಯ ಈ ವಿಷಯದ ಬಗ್ಗೆ ಸ್ವತಃ ಬಿಟೌನ್ ಬೆಡಗಿ ಕರೀನಾ ಕಪೂರ್ ಮಾತಾಡಿದ್ದಾರೆ.
ಸೌತ್ ಸಿನಿಮಾದಲ್ಲಿ ಕರೀನಾ ಕಪೂರ್ ನೋಡಲು ಅಭಿಮಾನಿಗಳ ಕೂಡ ಕಾತುರದಿಂದ ಕಾಯ್ತಿದ್ದು, ಈ ನಡುವೆ ನಟಿ ಸೌತ್ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿರುವುದರ ಬಗ್ಗೆ ಸ್ಪಷನೆ ನೀಡಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್, ಬಾಲಿವುಡ್ ಬ್ಲೈಡ್ಸ್ ಗಾಸಿಪ್ ಶೇರ್ ಮಾಡಿರುವ ವಿಡಿಯೋವೊಂದರಲ್ಲಿ “ನಾನು ಬಿಗ್ ಬಜೆಟ್ ಸೌತ್ ಸಿನಿಮಾ ಮಾಡುತ್ತಿದ್ದೇನೆ. ಸದ್ಯ ಆ ಸಿನಿಮಾ ಭಾರತದಾದ್ಯಂತ ಸದ್ದು ಮಾಡ್ತಿದೆ. ನಾನು ಎಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಇದೇ ಮೊದಲ ಬಾರಿಗೆ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನನ್ನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಲು ಕಾಯ್ತಿದ್ದೇನೆ” ಎಂದು ಹೇಳಿದ್ದಾರೆ.