Bengaluru 22°C
Ad

ಜೂನ್ 27 ರಂದು ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಬಿಡುಗಡೆ

ಕಲ್ಕಿ 2898 AD ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಭಿಮಾನಿಗಳ ಸಿನಿಮಾ ನೋಡುವ ಕಾತುರ ಹೆಚ್ಚಾಗಿದೆ. ಎರಡನೇ ಟ್ರೇಲರ್​ನಲ್ಲಿ ಚಿತ್ರದಲ್ಲಿನ ಹೊಸ ಪಾತ್ರಗಳೂ ಅನಾವರಣಗೊಂಡಿವೆ.

‘ಕಲ್ಕಿ 2898 AD’ ಚಿತ್ರದ ಹೊಸ ಟ್ರೇಲರ್‌ನಲ್ಲಿ ನಟಿ ಮಾಳವಿಕಾ ನಾಯರ್ ಅವರ ಒಂದು ನೋಟ ಕಂಡುಬಂದಿದೆ. ಬೆನ್ನಲ್ಲೇ ಚಿತ್ರದಲ್ಲಿ ಮಾಳವಿಕಾ ಪಾತ್ರದ ಬಗ್ಗೆ ಚರ್ಚೆಗಳು ಶುರುವಾಗಿವೆ.

ಮಾಳವಿಕಾ ಉತ್ತರೆ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅರ್ಜುನ್ ಪುತ್ರ ಅಭಿಮನ್ಯು ಪತ್ನಿ ಉತ್ತರೆ. ಟ್ರೇಲರ್‌ನಲ್ಲಿ ಬ್ರಹ್ಮಾಸ್ತ್ರದ ಮೂಲಕ ಆಕೆಯ ಹಲ್ಲೆ ನಡೆಸಿರುವುದು ಕಂಡುಬಂದಿದೆ.

ಪಾಂಡವರನ್ನು ಕೊಲ್ಲಲು ಸಾಧ್ಯವಾಗದ ಕಾರಣ ಅಶ್ವತ್ಥಾಮನು ಉತ್ತರೆಯ ಗರ್ಭದ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾನೆ. ಆಗ ಉತ್ತರೆಯ ಗರ್ಭದಿಂದ ಆಚೆ ಬಂದ ಮಗು ಸಾವನ್ನಪ್ಪುತ್ತದೆ. ಕೊನೆಗೆ ಶ್ರೀಕೃಷ್ಣನ ಆಗಮನವಾಗಿ ಮಗುವಿಗೆ ಮರುಜನ್ಮ ಸಿಗುತ್ತದೆ.

ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಜೂನ್ 27, 2024 ರಂದು ಬಿಡುಗಡೆ ಆಗಲಿದೆ. ಇದೊಂದು ವೈಜ್ಞಾನಿಕ ಕಾಲ್ಪನಿಕ ಚಿತ್ರ. ಚಿತ್ರವು ಜೂನ್ 27, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೈಜಯಂತಿ ಮೂವೀಸ್ ಚಿತ್ರವನ್ನು ನಿರ್ಮಿಸಿದೆ. ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. 3 ಗಂಟೆ 56 ಸೆಕೆಂಡುಗಳ ಸುದೀರ್ಘ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.

Ad
Ad
Nk Channel Final 21 09 2023
Ad