Bengaluru 28°C
Ad

ಅಭಿಮಾನಿಗಳ ಬಳಿ ಜೈಲಿನಲ್ಲಿರೋ ದರ್ಶನ್ ನಿಂದ ವಿಶೇಷ ಮನವಿ

Darshan

ಬೆಂಗಳೂರು: ನಟ ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಜೈಲು ಸೇರಿದ್ದಾರೆ. ನಿತ್ಯವೂ ದರ್ಶನ್ ಫ್ಯಾನ್ಸ್ ಜೈಲಿನ ಎದುರು ಸೇರುತ್ತಿದ್ದಾರೆ. ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ. ದರ್ಶನ್ ಅವರನ್ನು ಭೇಟಿಗೆ ಪೊಲೀಸರ ಬಳಿ ಅವಕಾಶ ಕೇಳುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಹೀಗಾಗಿ ದರ್ಶನ್ ಅವರೇ ಈಗ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.

ಜೈಲಿನಿಂದಲೇ ನಟ ದರ್ಶನ್ ಮನವಿ ಮಾಡಿದ್ದಾರೆ. ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ‘ಯಾರೂ ಜೈಲಿನ ಬಳಿ ಬರಬೇಡಿ’ ಎಂದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿದ್ದಾರೆ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಹೀಗಾಗಿ ಸುಮ್ಮನೆ ಬಂದು ಸಮಯ ವ್ಯರ್ಥ ಮಾಡದಂತೆ ದರ್ಶನ್ ಕೋರಿದ್ದಾರೆ ಎನ್ನಲಾಗಿದೆ.

‘ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಬೇಡ’ ಎಂದು ದರ್ಶನ್ ಅವರು ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ. ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷ ಚೇತನ ಯುವತಿ ದರ್ಶನ್ ಭೇಟಿಗೆ ಬಂದಿದ್ದರು. ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ.  ಹೀಗಾಗಿ ದರ್ಶನ್‌ ಮನವಿ ಮಾಡಿಕೊಂಡಿದ್ದಾರೆ.

Ad
Ad
Nk Channel Final 21 09 2023
Ad