ಮುಂಬೈ: ಬಾಲಿವುಡ್ ನಟಿ, ದಿ. ಶ್ರೀದೇವಿ ಮಗಳಾದ ಜಾನ್ವಿ ಕಪೂರ್ ಬಾಯ್ಫ್ರೆಂಡ್ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.
ಜಾನ್ವಿ ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ರಾಜಕೀಯ ಮನೆತನಕ್ಕೆ ಸೇರಿದವರಾಗಿದ್ದು, ಈಗಾಗಲೇ ಇವರಿಬ್ಬರ ಪ್ರೀತಿಯನ್ನು ಮನೆಯಲ್ಲಿ ಒಪ್ಪಿಕೊಳ್ಳಲಾಗಿದೆ.
ಜಾನ್ವಿ ಕಪೂರ್ ಕೂಡ ಶಿಖರ್ ಜೊತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಶಿಖರ್ ಜೊತೆನೇ ತಮ್ಮ ಮದುವೆ ಅಂತಾ ಜಾನ್ವಿ ಕಪೂರ್ ಈಗಾಗಲೇ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ನಡೆದಿದ್ದ ಕಾರ್ಯಕ್ರಮದಲ್ಲಿ ಜಾನ್ವಿ ಶಿಖರ್ ಅನ್ನೋ ಹೆಸರು ಇರುವ ನೆಕ್ಲೆಸ್ ಧರಿಸಿ, ತಮ್ಮ ಮತ್ತು ಶಿಖರ್ ಸಂಬಂಧವನ್ನು ಸ್ಪಷ್ಟಪಡಿಸಿದ್ದಾರೆ. ಈ ಹಾರದಲ್ಲಿ ಶಿಖು ಅಂತಾ ಬರೆದಿದೆ. ಇನ್ನು ಶಿಖರ್ ಮತ್ತು ಜಾನ್ವಿ ಬಾಲ್ಯದ ಗೆಳೆಯರಾಗಿದ್ದು, ಗೆಳೆತನ ಪ್ರೀತಿಗೆ ತಿರುಗಿ, ಇದೀಗ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ.