ಲಕ್ನೋ: ರೀಲ್ಸ್ ಮಾಡುವ ವಿಚಾರಕ್ಕೆ ಸಿಐಎಸ್ಎಫ್ ಗಾರ್ಡ್ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದ ಪ್ರಸಿದ್ಧ ತಾಜ್ ಮಹಲ್ನಲ್ಲಿ ನಡೆದಿದೆ.
ಯುವತಿಯೊಬ್ಬರು ಪ್ರವಾಸಕ್ಕೆಂದು ಗೆಳೆಯರ ಜೊತೆ ತಾಜ್ ಮಹಲ್ಗೆ ಬಂದಿದ್ದರು. ಈ ವೇಳೆ ಯುವತಿ ಹಾಗೂ ಸ್ನೇಹಿತರು ರೀಲ್ಸ್ ಮಾಡಲು ಮುಂದಾಗಿದ್ದರು. ಆಗ ಅಲ್ಲಿ ಕಾವಲಿದ್ದ ಸಿಐಎಸ್ಎಫ್ ಗಾರ್ಡ್ ಯುವತಿಯನ್ನ ರೀಲ್ಸ್ ಮಾಡದಂತೆ ತಡೆದಿದ್ದಾರೆ. ಇದೇ ವಿಚಾರವಾಗಿ ಸಿಐಎಸ್ಎಫ್ ಗಾರ್ಡ್ ಹಾಗೂ ಯುವತಿ ನಡುವೆ ಬಿರುಸಿನ ವಾಗ್ವಾದ ನಡೆದು ತಾರಕಕ್ಕೇರಿದೆ ಎನ್ನಲಾಗಿದೆ.
ಬಳಿಕ ಸಿಐಎಸ್ಎಫ್ ಸಿಬ್ಬಂದಿ ಯುವತಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ವಿಡಿಯೋದಲ್ಲಿ ಸಿಬ್ಬಂದಿ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವುದಕ್ಕೆ ನೆಟ್ಟಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಐಎಸ್ಎಫ್ ಗಾರ್ಡ್ನ ವರ್ತನೆಗೆ ಆಕ್ರೋಶ ವ್ಯಕ್ತವಾಗ್ತಿದೆ.
आगरा में ताजमहल के सुरक्षाकर्मी ने की गुंडई.
ताज का दीदार करने आई महिला के साथ की विवाद. वीडियो वायरल. pic.twitter.com/LkDNuRMq4X— Priya singh (@priyarajputlive) April 6, 2024