ಮುಂಬೈ: ಕೆಲವು ಮಂಗಳಮುಖಿಯರು ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುತ್ತಾರೆ. ಆದರೆ ಇದೀಗ ಮಂಗಳಮುಖಿಯರ ಅತಿರೇಕದ ವರ್ತನೆಯ ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ರೈಲಿನ ಒಳಗೆ ಕೆಲವು ಯುವಕರು ಬಾತ್ರೂಮ್ ಬಾಗಿಲಿನ ಬಳಿ ನಿಂತಿದ್ದಾರೆ. ಅಲ್ಲಿ ಓರ್ವ ಮಂಗಳಮುಖಿ ಕೈ ಚಪ್ಪಾಳೆ ತಟ್ಟುತ್ತಾ ಯುವಕರ ಬಳಿಕ ಹಣ ಕೇಳುತ್ತಾಳೆ. ಆದರೆ, ಅಷ್ಟರಲ್ಲಿ ಬಾತ್ರೂಂ ಪಕ್ಕದಲ್ಲೇ ನಿಂತಿದ್ದ ಹುಡುಗನನ್ನು ಬಲವಂತವಾಗಿ ಒಳಗಡೆ ಎಳೆದುಕೊಂಡು ಲಾಕ್ ಮಾಡಿಕೊಳ್ಳುತ್ತಾಳೆ. ಹೊರಗಡೆ ಇದ್ದ ಕೆಲವು ಯುವಕರು ಎಷ್ಟೇ ಹೊತ್ತು ಬಡಿದರೂ ಬಾಗಿಲು ತೆಗೆಯುವುದೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ಪ್ಯಾಂಟ್ ಸರಿಮಾಡಿಕೊಂಡು ಯುವಕ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ ಮಂಗಳಮುಖಿಯು ಹೊರಬಂದು ಮತ್ತೊಂದು ಬೋಗಿಗೆ ಹೋಗುತ್ತಾಳೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರೈಲುಗಳಲ್ಲಿ ಭದ್ರತೆಯ ಕೊರತೆ ಇದೆ. ಮಂಗಳಮುಖಿಯರು ಮಿತಿ ಮೀರಿ ವರ್ತಿಸುತ್ತಿದ್ದಾರೆ ಎಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ.
Boys are not safe in public places pic.twitter.com/5GS1SB7E7g
— Kattappa (@GANESHV81214930) April 4, 2024