ದಶಕಗಳ ನಂತರ ಕಟ್ರೀನಾ ಹಾಗೂ ಅಕ್ಷಯ್ ಕುಮಾರ್ ಮತ್ತೆ ಸ್ಕ್ರೀನ್ ಮೇಲೆ ಕಾಣಿಸಲಿದ್ದು, ಬಹುನಿರೀಕ್ಷೆಯ ಸೂರ್ಯವಂಶಿ ಚಿತ್ರ ಇಂದು ಬಿಡುಗಡೆಯಾಗಿದೆ. ವಿಶ್ವದಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಅಕ್ಷಯ್ ಆಕ್ಷನ್ ನೋಡಲು ಜನ ಕಾತರರಾಗಿದ್ದಾರೆ.
ಸೂರ್ಯವಂಶಿಗೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಏಪ್ರಿಲ್ನಲ್ಲೇ ಬಿಡುಗಡೆ ಆಗಬೇಕಿದ್ದ ಸಿನಿಮಾ ಕೊರೋನಾ ಕಾರಣದಿಂದ ಇಂದು ರಿಲೀಸ್ ಆಗಿದೆ. ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ಅಜಯ್ ದೇವಗನ್ ಹಾಗೂ ಕಟ್ರೀನಾ ಕೈಫ್ ಮುಖ್ಯತಾರಾಂಗಣದಲ್ಲಿ ಇದ್ದಾರೆ.