ಬಾಲಿವುಡ್ನ ಬಹುಬೇಡಿಕೆ ಸಿನಿಮಾ ಸೂರ್ಯವಂಶಿಯ ‘ಮೇರೆ ಯಾರಾ’ ಹಾಡು ನಾಳೆ ಬಿಡುಗಡೆಯಾಗಲಿದೆ. ಕಟ್ರೀನಾ ಕೈಫ್ ಹಾಗೂ ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದು, ರೋಹಿತ್ ಶೆಟ್ಟಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಇದೊಂದು ಆಕ್ಷನ್ ಕ್ರೈಂ ಥ್ರಿಲ್ಲರ್ ಆಗಿದ್ದು, ರೊಮ್ಯಾನ್ಸ್ ಕೂಡ ಇದೆ. ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿರುವ ಮೇರೆ ಯಾರಾ ಹಾಡು ರಿಲೀಸ್ ಆಗಿದ್ದು, ಕಟ್ರೀನಾ ತುಂಬಾನೇ ಖುಷಿಯಾಗಿದ್ದಾರೆ.
ಅರಿಜಿತ್ ಸಿಂಗ್ ಹಾಗೂ ನೀತಿ ಮೋಹನ್ ಈ ಹಾಡಿಗೆ ಧ್ವನಿಯಾಗಿದ್ದು, ಹಾಡು ಕೇಳಿ ಪ್ರೋತ್ಸಾಹಿಸಿ ಎಂದು ಕಟ್ರೀನಾ ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಅಲ್ಲದೇ ಈ ಸಾಂಗ್ ಬಗ್ಗೆ ಜನರ ರಿಯಾಕ್ಷನ್ ಪಡೆಯಲು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದೇನೆ ಎಂದೂ ಹೇಳಿದ್ದಾರೆ.