News Karnataka Kannada
Monday, April 29 2024
ಬಾಲಿವುಡ್

ಬಿಗ್​ ಬಾಸ್​ 15ನೇ ಸೀಸನ್​ ಆರಂಭ : ಸುಶಾಂತ್​ ಸಿಂಗ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಬಿಗ್​ ಬಾಸ್​ ಮನೆಗೆ

New Project (5)
Photo Credit :

ಹಿಂದಿ ಬಿಗ್​ ಬಾಸ್​ ಈಗ 15ನೇ ಸೀಸನ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಗ್​ ಬಾಸ್​ ಒಟಿಟಿ ಶೋ ಪೂರ್ಣಗೊಂಡಿದ್ದು, ಶೀಘ್ರವೇ ಬಿಗ್​ ಬಾಸ್​ 15ನೇ ಸೀಸನ್​ ಆರಂಭಗೊಳ್ಳಲಿದೆ. ಅಚ್ಚರಿ ವಿಚಾರ ಎಂದರೆ, ಸುಶಾಂತ್​ ಸಿಂಗ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಬಿಗ್​ ಬಾಸ್​ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.

ಸುಶಾಂತ್​ ಸಿಂಗ್ ಸಾವಿನ ನಂತರದಲ್ಲಿ ರಿಯಾ ಚಕ್ರವರ್ತಿ ಹೆಸರು ಮುನ್ನೆಲೆಗೆ ಬಂದಿತ್ತು. ರಿಯಾ ಹಾಗೂ ಸುಶಾಂತ್​ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರ ನಡುವಿನ ಪ್ರೀತಿ ಮುರಿದು ಬಿದ್ದಿತ್ತು. ಸುಶಾಂತ್​ ಸಾವಿನ ಪ್ರಕರಣದ ತನಿಖೆ ವೇಳೆ ರಿಯಾ ವಿಚಾರಣೆ ಮಾಡಲಾಗಿತ್ತು. ನಂತರ ಅವರು ಈ ಪ್ರಕರಣದಲ್ಲಿ ಅರೆಸ್ಟ್​ ಕೂಡ ಆಗಿದ್ದರು.

ಅವರು ಜೈಲಿನಿಂದ ಜಾಮೀನು ಪಡೆದು ಹೊರ ಬಂದು ಹಲವು ತಿಂಗಳಾಗಿವೆ. ಈಗ ಬಿಗ್​ ಬಾಸ್ ತಂಡದವರು ರಿಯಾ ಅವರನ್ನು ಅಪ್ರೋಚ್​ ಮಾಡಿದ್ದಾರೆ ಎನ್ನಲಾಗಿದೆ.

ಇದಕ್ಕಾಗಿ ಪ್ರತಿ ವಾರ ಅವರು 35 ಲಕ್ಷ ರೂ. ಸಂಭಾವನೆ ರೂಪದಲ್ಲಿ ಆಫರ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಬಿಗ್​ಬಾಸ್​ ಕೂಡ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.

ರಿಯಾ ಚಕ್ರವರ್ತಿ ವೈಯಕ್ತಿಕ ಜೀವನದ ಬಗ್ಗೆ ಜನರಿಗೆ ಆಸಕ್ತಿ ಇದೆ. ಸುಶಾಂತ್ ಸಿಂಗ್​ ಜತೆ ಅವರು ಹೇಗಿದ್ದರು ಎನ್ನುವ ಬಗ್ಗೆಯೂ ಅನೇಕರಿಗೆ ಕುತೂಹಲವಿದೆ. ಒಂದೊಮ್ಮೆ ರಿಯಾ ಬಿಗ್​ ಬಾಸ್​ ಮನೆ ಒಳಗೆ ಹೋದರೆ ಒಂದಷ್ಟು ವಿಚಾರಗಳು ಹೊರ ಬರಲಿವೆ. ಕುತೂಹಲದಿಂದ ಜನರು ಕೂಡ ಶೋ ವೀಕ್ಷಣೆ ಮಾಡುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ರಿಯಾ ಅವರಿಗೆ ಮೊದಲ ಪ್ರಿಫರೆನ್ಸ್​ ನೀಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು