ಸಾಯಿಬಾಬಾ ದೇವರ ಪರಮ ಭಕ್ತೆ ಆಗಿರುವ ಸಿಂಪಲ್ ಬ್ಯೂಟಿ ಸಾಯಿ ಪಲ್ಲವಿ ಇದೀಗ ತಂದೆ-ತಾಯಿ ಜೊತೆ ಅಮರನಾಥ ಯಾತ್ರೆ ಕೈಗೊಂಡಿದ್ದರು. ಪೋಷಕರ ಜೊತೆ ಅಮರನಾಥ ಯಾತ್ರೆ ಮುಗಿಸಿರುವ ನಟಿ ಆ ಫೋಟೋ ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಮ್ಮ ಅಪ್ಪನೊಂದಿಗೆ ಅಮರನಾಥ ಯಾತ್ರೆ ಮಾಡಿದ್ದು ಎಂದಿಗೂ ಮರೆಯದ ಅನುಭವ ನೀಡಿದೆ. ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ. ಇಂತಹ ಯಾತ್ರೆಯು ಸಾಧ್ಯವಾಗಿದ್ದು ತಂದೆ ತಾಯಿಗಳ ಆಶೀರ್ವಾದದಿಂದ ಎಂದು ಸಾಯಿ ಪಲ್ಲವಿ ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬಾನೇ ಕಾಳಜಿ ವಹಿಸುತ್ತಿದ್ದಾರೆ.