ಪುದುಚೆರಿ: ಜನಪ್ರಿಯ ನಟಿ ಅಮಲಾ ಪೌಲ್ ಮೇಲೆ ವಂಚನೆ ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಬೇಕೆಂದು ಪುದುಚೆರಿ ಲೆ.ಗವರ್ನರ್ ಕಿರಣ್ ಬೇಡಿ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪೊಲೀಸ್ ಮಹಾನಿರ್ದೇಶಕರಿಗೆ ಮಂಗಳವಾರ ನಿರ್ದೇಶನ ನೀಡಿದ್ದಾರೆ.
ಐಷಾರಾಮಿ ಕಾರ್ ನ ತೆರಿಗೆ ಉಳಿಸುವ ಸಲುವಾಗಿ ಸುಳ್ಳು ವಿಳಾಸ ನೀಡಿ ಪುದುಚೆರಿಯಲ್ಲಿ ಕಾರ್ ನೋಂದಣಿ ಮಾಡಿಸಿದ ಮತ್ತು ತೆರಿಗೆ ವಂಚನೆ ಮಾಡಿದ ಆರೋಪವನ್ನು ಅಮಲಾ ಪೌಲ ಎದುರಿಸುತ್ತಿದ್ದಾರೆ.
20ಲಕ್ಷ ತೆರಿಗೆ ವಂಚನೆ: ನಟಿ ಅಮಲಾ ಪೌಲ್ 1.12ಕೋಟಿ ರೂ. ಮೊತ್ತದ ಎಸ್ ಕ್ಲಾಸ್ ಮರ್ಸಿಡಸ್ ಬೆಂಜ್ ಕಾರನ್ನು ಖರೀದಿಸಿದ್ದರು. ಕೇರಳದಲ್ಲಿ ಇದಕ್ಕೆ 20ಲಕ್ಷ ರೂ ಇದ್ದರೆ, ಪುದುಚೆರಿಯಲ್ಲಿ ಕೇವಲ 1.12 ಲಕ್ಷ ರೂಪಾಯಿ. ಅಂದರೆ ಸುಮಾರು 20 ಪಟ್ಟು ಕಡಿಮೆ ತೆರಿಗೆ ಇದೆ. ಹೀಗಾಗಿ ನಟಿ ಅಮಲಾ ಕಾರ್ ರಿಜಿಸ್ಟ್ರೇಶನ್ ಗೆ ಪುದುಚೆರಿಯ ಸಂಬಂಧಿಯೊಬ್ಬರ ವಿಳಾಸ ನೀಡಿದ್ದಾರೆ ಎನ್ನಲಾಗುತ್ತಿದೆ.