ಮಂಗಳೂರು ಬೆಡಗಿ ನೇಹಾ ಶೆಟ್ಟಿ ಅವರು ‘ಮುಂಗಾರು ಮಳೆ-೨’ ಸಿನಿಮಾದಲ್ಲಿ ನಟಿಸಿದ ನಂತರ ಸ್ಯಾಂಡಲ್ ವುಡ್ ಕಡೆ ತಲೆ ಹಾಕಿರಲಿಲ್ಲ. ನೇಹಾ ಶೆಟ್ಟಿ ಎಲ್ಲಿ ಹೋದ್ರು ಅಂತ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ರೆ, ನೇಹಾ ಅವರು ಮಾತ್ರ ಸದ್ದಿಲ್ಲದೇ ಟಾಲಿವುಡ್ ನತ್ತ ಮುಖ ಮಾಡಿದ್ದಾರೆ.
ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರ ಮಗನ ಜೊತೆ ಚೊಚ್ಚಲ ಸಿನಿಮಾವೊಂದಕ್ಕೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಸಹಿ ಮಾಡಿದ್ದು, ಈಗಾಗಲೇ ಆ ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗಿದೆ.
ಸ್ಟಾರ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರ ಮಗ ಪೂರಿ ಆಕಾಶ್ ಹಾಗೂ ನೇಹಾ ಶೆಟ್ಟಿ ಕಾಣಿಸಿಕೊಂಡಿರುವ ಚಿತ್ರಕ್ಕೆ ‘ಮೆಹಬೂಬ್’ ಎಂದು ಟೈಟಲ್ ಇಡಲಾಗಿದೆ. ನೇಹಾ ಅವರಿಗೆ ತೆಲುಗಿನಲ್ಲಿ ಇದು ಮೊದಲ ಸಿನಿಮಾವಾದರೂ ಕೂಡ ಗಮನ ಸೆಳೆಯುವ ಪಾತ್ರ ವಹಿಸಿದ್ದಾರೆ.
ಚಿತ್ರಕ್ಕೆ ಪೂರಿ ಜಗನ್ನಾಥ್ ಅವರೇ ಆಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ‘ಮೆಹಬೂಬ್’ ಸಿನಿಮಾದ ಟ್ರೈಲರ್ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.