ಅಮಿತಾಬ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾವಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಹಾಗೂ ಹಾಕಿ ಗೋಲ್ ಕೀಪರ್ ಪಿ ಆರ್ ಶ್ರೀಜೇಶ್ 25 ಲಕ್ಷ ರೂಪಾಯಿ ಗೆದ್ದಿದ್ದಾರೆ.
ಕಾರ್ಯಕ್ರಮದಲ್ಲಿ ಇವರು ಆಗಮಿಸುತ್ತಿದ್ದಂತೆ ಅಮಿತಾಬ್ ಬಚ್ಚನ್ ಅದ್ದೂರಿ ಸ್ವಾಗತಿಸಿದರು. ಆಟದ ಮದ್ಯೆ ಹಲವು ಆಕರ್ಷಕ ಸನ್ನಿವೇಶಗಳು ನೋಡುಗರನ್ನು ಮನಸೆಳೆಯಿತು. ಕಾರ್ಯಕ್ರಮದ ಮೂಲಕ ತಮ್ಮ ಆರಂಭದ ಜೀವನದ ಬಗ್ಗೆ ಕೆಲ ಕುತೂಹಲಕಾರಿ ಹಾಗೂ ಕಷ್ಟದ ದಿನಗಳ ಬಗ್ಗೆ ಇಬ್ಬರು ಪ್ಲೇಯರ್ಸ್ ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ನೀರಜ್ ಚೋಪ್ರಾ ಹಾಗೂ ಶ್ರೀಜೇಶ್ 13 ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡುವ ಮೂಲಕ 25 ಲಕ್ಷ ರೂಪಾಯಿ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದ ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದು, ಭಾರತೀಯ ಪುರುಷರ ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್ ಕಂಚಿನ ಪದಕ ಗೆದ್ದಿದ್ದಾರೆ.