ಮುಂಬೈ : ವಿಶ್ವದಲ್ಲೇ ಪ್ರಮಾಣಿಕ ನಗರದ ಪಟ್ಟಿಯಲ್ಲಿ ದೇಶದ ವಾಣಿಜ್ಯ ನಗರಿ ಮುಂಬೈಗೆ 2ನೇ ಸ್ಥಾನ ದೊರಕಿದೆ ಎಂದು ಇಂಡಿಯಾ ಟೈಮ್ಸ್ ವರದಿ ತಿಳಿಸಿದೆ. ರೀಡರ್ಸ್ ಡೈಜೆಸ್ಟ್ ಮ್ಯಾಗಜೀನ್ ವಾಲೆಟ್ ರಿಟರ್ನಿಂಗ್ ಎಂಬ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಈ ಸಮೀಕ್ಷೆಯನ್ನು ವಿಶ್ವದ ಹದಿನಾರು ನಗರಗಳಲ್ಲಿ ಪರ್ಸ್ ಗಳನ್ನು ಬೀಳಿಸಲಾಯಿತು.
ಈ ಪರ್ಸ್ ನಲ್ಲಿ ಮೊಬೈಲ್ ಫೋನ್, 4 ಸಾವಿರ ಹಣ, ಫೋಟೋ ಇರಿಸಲಾಗಿತ್ತು. ಅವುಗಳಲ್ಲಿ ಎಷ್ಟು ಮಂದಿ ಮರಳಿಸಿದ್ದಾರೆ ಎಂಬುದರ ಆಧಾರದ ಮೇಲೆ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಸಮೀಕ್ಷೆಗೆ ಆಂಸ್ಟರ್ಡ್ಯಾಮ್, ಬರ್ಲಿನ್, ಬುಕಾರೆಸ್ಟ್, ಬುಡಾಪೆಸ್ಟ್, ಹೆಲ್ಸಿಂಕಿ, ಲಿಸ್ಬನ್, ಲುಬ್ಲಜಾನಾ, ಲಂಡನ್, ಮ್ಯಾಡ್ರಿಡ್, ಮಾಸ್ಕೋ, ಮುಂಬೈ, ನ್ಯೂಯಾರ್ಕ್, ಪ್ರೇಗ್, ರಿಯೊ ಡಿ ಜನೈರೊ, ವಾರ್ಸಾ ಮತ್ತು ಜ್ಯೂರಿಚ್ ನಗರಗಳು ಸೇರಿವೆ.
ಈ ಸಮೀಕ್ಷೆಯಲ್ಲಿ ಫಿನ್ಲ್ಯಾಂಡ್ನ ‘ಹೆಲ್ಸಿಂಕಿ’ ವಿಶ್ವದ ‘ಅತ್ಯಂತ ಪ್ರಾಮಾಣಿಕ ನಗರʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡನೇ ಸ್ಥಾನ ಮುಂಬೈಗೆ ಸಿಕ್ಕಿದೆ.