News Karnataka Kannada
Wednesday, May 08 2024
ಮನರಂಜನೆ

ಸಂಗೀತದ ಹೆಮ್ಮರದಲ್ಲಿ ಬೀಡುಬಿಟ್ಟಿರುವ ಯುವ ಕೋಗಿಲೆ ದೀಕ್ಷಾ…

Photo Credit :

ಸಂಗೀತದ ಹೆಮ್ಮರದಲ್ಲಿ ಬೀಡುಬಿಟ್ಟಿರುವ ಯುವ ಕೋಗಿಲೆ ದೀಕ್ಷಾ...

ಈಗಾಗಲೇ ಹಲವಾರು ಕವರ್ ಸಾಂಗ್ ಗಳಲ್ಲಿ ಹಾಡಿ ಸಂಗೀತ ಪ್ರೇಮಿಗಳ ಹೃದಯ ಗೆದ್ದ ಮಧುರ ಕಂಠದ ಯುವ ಕೋಗಿಲೆ ದೀಕ್ಷಾ ರಾಮಕೃಷ್ಣ ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಟೆಕ್ ಪದವಿ ಓದುತ್ತಿದ್ದಾರೆ. ಉಡುಪಿಯ ಡಾ.ರಾಮಕೃಷ್ಣ ಹೆಗ್ಡೆ ಮತ್ತು ವಿದೂಷಿ ಶ್ರೀಮತಿ ಯಶ ರಾಮಕೃಷ್ಣ ಇವರ ಸುಪುತ್ರಿ ದೀಕ್ಷಾಳಿಗೆ ಸಂಗೀತವೆಂದರೆ ಉಸಿರು.

ಭರತನಾಟ್ಯ ಟೀಚರ್ ಆಗಿರುವ ತಾಯಿಯ ‘ಹೆಜ್ಜೆ ಗೆಜ್ಜೆ’ ಎಂಬ ತರಬೇತಿ ಕೇಂದ್ರದಲ್ಲಿ ಭರತನಾಟ್ಯದ ಹೆಜ್ಜೆ ಗೆಜ್ಜೆಗಳನ್ನು ಅರಗಿಸಿಕೊಂಡಿರುವ ದೀಕ್ಷಾ ಬಿಡುವಿದ್ದಾಗ ತನ್ನ ತಾಯಿಯ ಜೊತೆ ‘ಹೆಜ್ಜೆ ಗೆಜ್ಜೆ’ ತಂಡದಲ್ಲೆ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ವಾನ್ ಮಧುರ್ ಪಿ ಬಾಲಸುಬ್ರಮಣ್ಯಂ ಇವರ ಬಳಿ ಸಂಗೀತ ಜ್ಞಾನವನ್ನು ಪಡೆದಿರುವ ದೀಕ್ಷಾ, ರಾಘವೇಂದ್ರ ಆಚಾರ್ಯ ಮಣಿಪಾಲ ಇವರಿಂದ ಭಾವಗೀತೆಯನ್ನು ಕಲಿತಿದ್ದಾರೆ. ಭರತನಾಟ್ಯಂನಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿರುವ ದೀಕ್ಷಾ ಅದ್ಭುತವಾದ ನಾಟ್ಯಗಾರ್ತಿ ಕೂಡ. ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳದ ದೀಕ್ಷಾ ಮೋಹಿನಿ ಅಟ್ಟಂವನ್ನು ಕೇರಳದ ಕಲಾಮಂಡಲದ ರಾಜು ಮಾಸ್ಟರ್ ಬಳಿ ಕಲಿಯುತ್ತಿದ್ದಾರೆ ಮತ್ತು ತಾಳಜ್ಞಾನದ ಬಗ್ಗೆ ವಿದ್ವಾನ್ ರವಿಕುಮಾರ್ ಕುಂಜೂರು ಇವರ ಬಳಿ ಹೆಚ್ಚಿನ ಜ್ಞಾನವನ್ನು ಪಡೆಯುತ್ತಿದ್ದಾರೆ.

ತನ್ನ ಸಂಗೀತ ಯಾನದ ಬಗ್ಗೆ ಹೇಳುವ ದೀಕ್ಷಾ “ನನಗೆ ಸಂಗೀತ ಕಲಿಯಲು ಭರತನಾಟ್ಯವೇ ಕಾರಣ, 4ನೇ  ವಯಸ್ಸಿನಲ್ಲಿರುವಾಗ ಉಮಾಶಂಕರಿಯವರ ಬಳಿ ಸಂಗೀತ ಪಾಠ ಕಲಿಯುತ್ತಿದ್ದೆ. ಭರತನಾಟ್ಯದ ಜೊತೆಜೊತೆಗೆ ಸಂಗೀತವನ್ನೂ ಕಲಿಯುತ್ತಾ ಬಂದೆ. ಆ ಸಮಯದಲ್ಲಿ ಸಂಗೀತದಲ್ಲಿನ ನನ್ನ ಉತ್ಸಾಹವನ್ನು ನೋಡಿ ಗುರುಗಳಾದ ರಾಘವೇಂದ್ರ ಆಚಾರ್ಯರವರು ನನ್ನ ತಂದೆ-ತಾಯಿ ಬಳಿ ಈ ವಿಚಾರವನ್ನು ಹೇಳಿ ಸಂಗೀತ ತರಗತಿಗೆ ಕಲಿಸುವಂತೆ ಒಪ್ಪಿಸಿದ್ದರು. ಅಲ್ಲಿಂದ ನನಗೆ ಸಿಕ್ಕ ಸಂಗೀತ ತರಬೇತಿಯಿಂದ ನಂತರ 9 ನೇ ತರಗತಿಯಲ್ಲಿರುವಾಗ “ಎದೆ ತುಂಬಿ ಹಾಡುವೆನು” ರಿಯಾಲಿಟಿ ಷೋದಲ್ಲಿ ಅವಕಾಶ ಸಿಕ್ತು. ಆದರೂ ಇಲ್ಲಿವರೆಗೆ ಮಾಡಿದ್ದು ದೊಡ್ಡ ಸಾಧನೆಯೇನಲ್ಲ, ಮಾಡುವಂತಹ ಸಾಧನೆ ತುಂಬಾನೆ ಇದೆ.” ಎನ್ನುತ್ತಾರೆ.

ರಸಾಯನ ಶಾಸ್ತ್ರದಲ್ಲಿ ಅಧ್ಯಾಪಕಿಯಾಗಿದ್ದರೂ ತನ್ನ ನಾಟ್ಯ ತರಬೇತಿ ಕೇಂದ್ರವನ್ನೂ ಏಕಕಾಲದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ತಾಯಿಯಿಂದಲೇ ಸ್ಫೂರ್ತಿ ಪಡೆದಿರುವ ದೀಕ್ಷಾ ಸಾಧನೆ ಜೊತೆಗೆ ಬದುಕನ್ನೂ ಸರಿದೂಗಿಸಿಕೊಂಡು ಹೋಗುವ ಕಲೆಯನ್ನು ಕಲಿತಿದ್ದಾರೆ. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆ ಕಲೆಗೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಯೋಚನೆ ಹೊಂದಿರುವ ದೀಕ್ಷಾ ವೃತ್ತಿಪರ ನಾಟ್ಯ ಮತ್ತು ಸಂಗೀತ ಕಲಾವಿದೆಯಾಗಲು ಬಯಸುತ್ತಾ ತನ್ನ ತಾಯಿಯ ‘ಹೆಜ್ಜೆ ಗೆಜ್ಜೆ’ ತಂಡವನ್ನು ಇನ್ನೂ ಎತ್ತರಕ್ಕೆ ಕೊಂಡೋಗಲು ಆಶಿಸುತ್ತಾರೆ.

ಸದ್ಯಕ್ಕೆ ಸಂಗೀತ ಮತ್ತು ನಾಟ್ಯ ಬಿಟ್ಟರೆ ಬೇರೆ ಯಾವುದೇ ಯೋಚನೆಗಳಿಲ್ಲ ಎನ್ನುತ್ತಾರೆ. ದೀಕ್ಷಾ ಹಾಡಿರುವ ‘ಎಂ.ಎಸ್.ಧೋನಿ’ ಹಿಂದಿ ಚಿತ್ರದ ‘ಕೌನ್ ತುಜೇ…’ ಕವರ್ ಸಾಂಗನ್ನು ಮನಮುಟ್ಟುವಂತೆ ಚಿತ್ರಿಸಿ, ಸಂಕಲಿಸಿರುವುದು ಮಂಗಳೂರಿನ ಸೃಜನಶೀಲ ಯುವ ಸಂಕಲನಕಾರ ಕಂ ಛಾಯಾಗ್ರಾಹಕ ವಿವೇಕ್ ಗೌಡ.

ವೀಡಿಯೋ ಸಾಂಗಿನ ಲಿಂಕ್ ಇಲ್ಲಿದೆ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು