ಖ್ಯಾತ ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರೆ. ಸಹೋದ್ಯೋಗಿ ಅಕ್ಷಯ್ ಎಂಬುವವರ ಜೊತೆ ಅವರ ಮದುವೆ ಆಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಈ ಶುಭ ಸಮಾರಂಭ ನೆರವೇರುತ್ತಿದೆ.
ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಕ್ಷಯ್ ಮತ್ತು ನಿಹಾರಿಕಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಕೊರೊನಾ ವೈರಸ್ ಹರಡುವ ಭೀತಿಯಂದಾಗಿ ತುಂಬ ಖಾಸಗಿಯಾಗಿ ಮದುವೆ ಮಾಡಲಾಗಿದೆ. ಕುಟುಂಬದವರು ಮತ್ತು ಕೆಲವೇ ಕೆಲವು ಮಂದಿ ಆಪ್ತರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದು, ಭಾನುವಾರ ರಾತ್ರಿ ಸಂಗೀತ್ ಕಾರ್ಯಕ್ರಮ ನಡೆದಿತ್ತು. ಹಾಗೂ ಇಂದಿನ ಸಮಾರಂಭದಲ್ಲಿ ಸ್ನೇಹಿತರು ಮತ್ತು ಕನ್ನಡ ಚಿತ್ರರಂಗದ ಕೆಲವರು ಭಾಗವಹಿಸಿದ್ದರು.