ಮಂಗಳೂರು: ಅಭಯ ಸಿಂಹ ನಿರ್ದೇಶನದ ಪಡ್ಡಾಯಿ ಸಿನಿಮಾವು ಗೋವಾದಲ್ಲಿ ನಡೆಯಲಿರುವ 49ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಆಯ್ಕೆಯಾಗಿದೆ.
ತುಳು ಚಿತ್ರವೊಂದು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದು ಅಭಯ್ ಸಿಂಹ ತಿಳಿಸಿದರು. ಈ ವಿಭಾಗಕ್ಕೆ ಯಾವುದೇ ಕನ್ನಡ ಸಿನಿಮಾವು ಆಯ್ಕೆಯಾಗದೆ ತುಳು ಸಿನಿಮಾ ಆಯ್ಕೆಯಾಗಿದೆ.
ಜನಪ್ರಿಯ ನಿರ್ದೇಶಕ ಹಾಗೂ ಸಂಭಾಷಣೆಕಾರ ರಾಹುಲ್ ರವೈಲ್ ಅವರಿದ್ದ 13 ಸದಸ್ಯರ ಸಮಿತಿಯು ಈ ಆಯ್ಕೆ ಮಾಡಿದೆ.