News Karnataka Kannada
Wednesday, May 01 2024
ಮನರಂಜನೆ

ಖ್ಯಾತ ಬಾಲಿವುಡ್ ನಟ ವಿನೋದ್ ಖನ್ನಾ ಅವರಿಗೆ ಸಂದ ಫಾಲ್ಕೆ ಪ್ರಶಸ್ತಿ

Photo Credit :

ಖ್ಯಾತ ಬಾಲಿವುಡ್ ನಟ ವಿನೋದ್ ಖನ್ನಾ ಅವರಿಗೆ ಸಂದ ಫಾಲ್ಕೆ ಪ್ರಶಸ್ತಿ

ಸಿನಿಮಾ ರಂಗಕ್ಕೆ ನೀಡುವ ಅತ್ಯಂತ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಟ್ಟಿ ಪ್ರಕಟ ಆಗಿದ್ದು, ಈ ಬಾರಿ ಬಾಲಿವುಡ್ ಖ್ಯಾತ ದಿವಂಗತ ನಟ ವಿನೋದ್ ಖನ್ನಾ ಅವರಿಗೆ ಲಭಿಸಿದೆ. ವಿನೋದ್ ಖನ್ನಾ ಅವರ ಮರಣಾನಂತರ ಅವರಿಗೆ ಈ ಪ್ರಶಸ್ತಿ ದೊರೆತಿದ್ದು, ಇಂದು 65ನೇ ರಾಷ್ಟ್ರ ಪ್ರಶಸ್ತಿ ದೆಹಲಿಯಲ್ಲಿ ಪ್ರಕಟ ಆಗಿದೆ. ಈ ಸಂದರ್ಭದಲ್ಲಿ ವಿನೋದ್ ಖನ್ನಾ ಅವರಿಗೆ ಫಾಲ್ಕೆ ಪ್ರಶಸ್ತಿ ದೊರೆತಿದೆ.

ವಿನೋದ್ ಖನ್ನಾ ಅವರು ಜನಿಸಿದ್ದು 1946ರ ಅಕ್ಟೋಬರ್ 6ರಂದು. ಇವರು 1968ರಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ‘ಅಮರ್ ಅಕ್ಬರ್ ಅಂಥೋನಿ’, ‘ಮೇರಾ ಗಾಂವ್ ಮೇರಾ ದೇಶ್’, ‘ಮೇರೆ ಅಪ್ನೆ’, ‘ಗದ್ದಾರ್’, ‘ಮುಖಂದರ್ ಕಾ ಸಿಖಂದರ್’ ಹೀಗೆ ಸುಮಾರು ೧೪೦ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪಿತ್ತಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ವಿನೋದ್ ಖನ್ನಾ ಅವರು ಕಳೆದ ವರ್ಷ ಎಪ್ರಿಲ್ ನಲ್ಲಿ ಸರ್ ಹೆಚ್.ಎನ್ ರಿಲಯನ್ಸ್ ಪ್ರತಿಷ್ಠಾನದ ಆಸ್ಪತ್ರೆಯಲ್ಲಿ ತಮ್ಮ ೭೦ನೇ ವಯಸ್ಸಿನಲ್ಲಿ ನಿಧನರಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು