ನವದೆಹಲಿ: ರಫೆಲ್ ಜೆಟ್ ನ ಖರೀದಿ ಮೊತ್ತ ಮತ್ತು ಅದರ ಬೆಲೆ ಬಗ್ಗೆ ಹತ್ತು ದಿನಗಳ ಒಳಗಡೆ ಸೀಲ್ ಮಾಡಿದ ಲಕೋಟೆಯಲ್ಲಿ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಜೆಟ್ ವಿಮಾನಗಳ ಬೆಲೆಯು ಸರಿಯಾಗಿದೆಯಾ ಎಂದು ತಿಳಿಯಲು ಒಪ್ಪಂದದ ಮಾಹಿತಿಯನ್ನು ನೀಡಬೇಕು ಎಂದು ಸುಪ್ರೀಂಕೋರ್ಟ್ ಕಳೆದ ವಿಚಾರಣೆ ವೇಳೆ ಹೇಳಿತ್ತು.
ಜೆಟ್ ನ ಬೆಲೆ ಮತ್ತು ಒಪ್ಪಂದದ ಮಾಹಿತಿಯನ್ನು ಸೀಲ್ ಮಾಡಿರುವ ಲಕೋಟೆಯಲ್ಲಿ ನೀಡಬೇಕು. ಮುಂದಿನ ಹತ್ತು ದಿನಗಳಲ್ಲಿ ಇದನ್ನು ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಾಧೀಶರಾಗಿರುವ ರಂಜನ್ ಗೊಗೊಯಿ ಅವರು ಆದೇಶಿಸಿದ್ದಾರೆ.