News Karnataka Kannada
Friday, May 03 2024
ಕ್ಯಾಂಪಸ್

ಯೇನೆಪೋಯ ನರ್ಸಿಂಗ್ ಕಾಲೇಜ್ ಪದವಿ ಪ್ರಧಾನ ಕಾರ್ಯಕ್ರಮ

Yenepoya College of Nursing Graduation Program
Photo Credit : News Kannada

ಮಂಗಳೂರು: ಯೇನೆಪೋಯ ನರ್ಸಿಂಗ್ ಕಾಲೇಜ್ ಇದರ 15ನೇ ಪದವಿ ಪ್ರಧಾನ ಕಾರ್ಯಕ್ರಮ ಶನಿವಾರ ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. 140 ನರ್ಸಿಂಗ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಯೇನೆಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾಕ್ಟರ್ ಲೀನಾ ಕೆ ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಾದರ್ ಮುಲ್ಲರ್ಸ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಸಿಸ್ಟರ್ ಜೆಸ್ಸಿಂತ ಡಿಸೋಜಾ ಗೌರವ ಅತಿಥಿಗಳಾಗಿದ್ದರು. ದಾದಿಯರು ತಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಲು ಬದ್ಧತೆ ಸಹಾನುಭೂತಿ ಮತ್ತು ಕೌಶಲ್ಯ ಸೇರಿದಂತೆ ಹೊಂದಿರಬೇಕಾದ ಅಗತ್ಯ ಗುಣಗಳ ಮಹತ್ವಗಳನ್ನು ತಿಳಿಸಿದರು.

ತಮ್ಮ ಸ್ಥಾನಗಳನ್ನು ಲೆಕ್ಕಿಸದೆ ದಾದಿಯರು ಎಲ್ಲರಿಗೂ ಆಶೀರ್ವಾದವಾಗಬೇಕೆಂಬ ಗುರಿಯನ್ನು ಹೊಂದಿರಬೇಕು ಎಂಬ ಕಲ್ಪನೆಯನ್ನು ಅವರು ಒತ್ತಿ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಡಾಕ್ಟರ್ ರೋಯ್ ಕೆ ಜಾರ್ಜ್ , ನ್ಯಾಷನಲ್ ಪ್ರೆಸಿಡೆಂಟ್, ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ ಪ್ರಾಂಶುಪಾಲರು ಬೇಬಿ ಮೆಮೋರಿಯಲ್ ನರ್ಸಿಂಗ್ ಕಾಲೇಜ್ ಕೊಯ್ ಕೋಡ್ ಇವರು ಪ್ರಚಲಿತ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಾಮುಖ್ಯತೆಯನ್ನು ಹೇಳಿದರು ಮತ್ತು ಸಾಂಕ್ರಾಮಿಕ ಸಮಯದಲ್ಲಿ ದಾದಿಯರು ನಿರ್ವಹಿಸಿದ ನಿರ್ಣಾಯಕ ಪಾತ್ರವನ್ನು ಶ್ಲಾಘಿಸಿದರು. ಜಾನೆಟ್ ಮೀರಾಂಡ ಹಾಗೂ ಗಿರೀಶ್ ಜಿ ಆರ್ ಅವರು ಪದವೀಧರರನ್ನು ಪ್ರಸ್ತುತಪಡಿಸಿದರು. ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಉಪ ಪ್ರಾಂಶುಪಾಲರಾದ ಡಾ. ಬಿ.ಆರ್. ರೇಷ್ಮಾ ಅರಾನ್ನ ಸ್ವಾಗತಿಸಿದರು. ಡಾ. ರೆನಿಟಾಪ್ರಿಯ ಡಿಸೋಜ ವಂದಿಸಿದರು ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಕೊನೆಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು