News Karnataka Kannada
Saturday, May 04 2024
ಕ್ಯಾಂಪಸ್

ಮಂಗಳೂರು: ಟೆಕ್ನೋ ಕಲ್ಚರಲ್ ಫೆಸ್ಟ್ ತೈರಾ -೨೦೨೩ರ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ

National Level Techno Cultural Fest TIARA 2023 inaugurated at St Joseph Engineering College.
Photo Credit : News Kannada

ಮಂಗಳೂರು: ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಟೆಕ್ನೋ ಕಲ್ಚರ್ ಫೆಸ್ಟ್ ತೈರಾ -೨೦೨೩ರ ಮೂರು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಇನ್ನು ಉದ್ಘಾಟನೆಗೆ ಆಕರ್ಷಣೆಯಾಗಿ ಏರೋ ಕ್ಲಬ್ ಏರೊ ಶೋ ಕಾರ್ಯಕ್ರಮ ಮನಸೂರೆಗೊಂಡಿತ್ತು, ಇನ್ನು ಕಾರ್ಯಕ್ರಮವನ್ನು ೭ಎಡ್ಜ್ ಪ್ರೈ ಲಿಮಿಟೆಡ್‌ನ ಸ್ಥಾಪಕಾಧ್ಯಕ್ಷರು ಮತ್ತು ಸಿಇಒ ಆಗಿರುವ ಆಶು ಕಜೆಕರ್ ಅವರು ಚಾಲನೆ ನೀಡಿದ್ರು. ತದ ಬಳಿಕ ಮಾತನಾಡಿದ ಅವರು, ಇಂತಹ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿದ ವಿದ್ಯಾರ್ಥಿಗಳನ್ನು ಅಭಿಂದಿಸಿದದರು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳ ಉದ್ಯಮಶೀಲತಾ ಕೌಶಲ್ಯ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದರು.

ತದ ಬಳಿಕ ಕಾಲೇಜಿನ ಪ್ರಾಂಶುಪಾಲರಾದ ಡಾ| ರಿಯೋ ಡಿಸೋಜಾ ಮಾತನಾಡಿದ ಅವರು, ವಿದ್ಯಾರ್ಥಿಗಳ ಪ್ರತಿಭೆಗೆ ಇದೊಂದು ಉತ್ತಮ ವೇದಿಕೆ ಸಿಕ್ಕಿದಂತಾಗಿದೆ. ಮುಂದಿನ ೩ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಈ ವೇಳೆ ಸಂಸ್ಥೆಯ ನಿರ್ದೇಶಕರಾದ ರೇ. ಫಾದರ್ ವಿಲ್ಫೇಡ್ ಪ್ರಕಾಶ್ ಡಿಸೋಜಾ, ಸಹಾಯಕ ನಿರ್ದೇಶಕರಾದ ರೇ.ಫಾದರ್ ಅಲ್ವಿನ್ ಆರ್ ಡಿಸೋಜಾ , ಉಪಪ್ರಾಂಶುಪಾಲರಾದ ಡಾ| ಪುರಷುತ್ತೋಮ ಚಿಪ್ಪಾರ್ , ಕಾಲೇಜಿನ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ರಾಕೇಶ್ ಲೋಬೋ , ಕಾರ್ಯಕ್ರಮದ ಸಂಚಾಲಕರಾದ ಪೂರ್ಣೇಶ್ ಎಂ, ಚೈತ್ರ ಯು.ಆರ್, ವಿದ್ಯಾರ್ಥಿ ಸಂಚಾಲಕರಾದ ವಿವೇಕ್ ಎಂ, ಪ್ರಜ್ಞಾ ನಾಗುರೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಮೂರು ದಿನಗಳಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಮತ್ತು ಸಾಮಥ್ಯಗಳನ್ನು ಪ್ರದರ್ಶಿಸಲು ಇಂದೊಂದು ಸೂಕ್ತ ವೇದಿಕೆಯಾಗಿದೆ. ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು