News Karnataka Kannada
Tuesday, May 07 2024
ಕ್ಯಾಂಪಸ್

ಮಂಗಳೂರು: ‘ಎಂಎಸ್‌ಎನ್‌ಐಎಂ’ನಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಅಂತರ್ಕಾಲೇಜು ಫೆಸ್ಟ್

MSNIM organizes ‘EDIFY 2022’ Intercollege Management Fest
Photo Credit : News Kannada

ಮಂಗಳೂರು, ಜು.2: ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ನಗರದ ಬೊಂದೆೆಲ್‌ನಲ್ಲಿರುವ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಮಂಗಳವಾರ, ಜೂನ್ 28, 2022 ರಂದು ಸ್ನಾತಕೋತ್ತರ ಮಟ್ಟದ ಅಂತರ್ಕಾಲೇಜು ಮ್ಯಾನೇಜ್‌ಮೆಂಟ್ ಫೆಸ್ಟ್ ‘ಎಡಿಫೈ 2022’ ಆಯೋಜಿಸಿತು. ಉತ್ಸವವು ಮಾನವ ಸಂಪನ್ಮೂಲ, ಮಾರ್ಕೆಟಿಂಗ್, ಹಣಕಾಸು, ಅತ್ಯುತ್ತಮ ವ್ಯವಸ್ಥಾಪಕ, ಸಾರ್ವಜನಿಕ ಸಂಪರ್ಕ ಮತ್ತು ವ್ಯಾಪಾರ ರಸಪ್ರಶ್ನೆ ಸ್ಪರ್ಧೆಗಳನ್ನು ಒಳಗೊಂಡಿತ್ತು. ಮಂಗಳೂರು ಮತ್ತು ಸುತ್ತಮುತ್ತಲಿನ 21 ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭಕ್ಕೆ ಗ್ಲೋ ಟಚ್ ಟೆಕ್ನಾಲಜೀಸ್‌ನ ಹಿರಿಯ ಉಪಾಧ್ಯಕ್ಷ ಮತ್ತು ಡೆಲಿವರಿ ಹೆಡ್ ಪಿ.ಸಿ ರಮೇಶ್ ಮುಖ್ಯ ಅತಿಥಿಯಾಗಿದ್ದರು. ವತಿಕಾ ಇಂಟರ್‌ನ್ಯಾಶನಲ್ ಟ್ರಾವೆಲ್ಸ್ನ ಮಾಲಕಿ ವತಿಕಾ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಮತ್ತು ಚಿತ್ರನಟಿ ಮತ್ತು ಯಾಹೂ ಸಂಸ್ಥೆಯ ತಾಂತ್ರಿಕ ಬೆಂಬಲ ವ್ಯವಸ್ಥಾಪಕಿ ಗಾನ ಭಟ್ ಅವರು ಸೆಲೆಬ್ರಿಟಿ ಅತಿಥಿಗಳಾಗಿದ್ದರು.

ಪಿ.ಸಿ.ರಮೇಶ್ ತಮ್ಮ ಉದ್ಘಾಟನಾ ಭಾಷಣದಲ್ಲಿ ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ನಿರಂತರ ತಯಾರಿ ಮತ್ತು ಕೌಶಲ್ಯಾಭಿವೃದ್ಧಿ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. “ಕಾರ್ಪೊರೇಟ್ ಜಗತ್ತಿನಲ್ಲಿ ಪ್ರವೇಶ ಪಡೆಯಲು ಪರಿಣಾಮಕಾರಿ ಸಂವಹನ, ನಿಮ್ಮ ಆಲೋಚನೆಗಳನ್ನು ಸಂಘಟಿಸುವುದು, ಗಮನವಿಟ್ಟು ಆಲಿಸುವ ಕೌಶಲ್ಯ ಮತ್ತು ನಿಮ್ಮ ಉತ್ತರಗಳ ಮೂಲಕ ಸಂದರ್ಶನವನ್ನು ಮುನ್ನಡೆಸುವ ಸಾಮರ್ಥ್ಯದ ಅಗತ್ಯವಿದೆ,” ಎಂದು ಅವರು ಹೇಳಿದರು.

ಅರ್ಜುನ್ ಕಾಪಿಕಾಡ್ ತುಳು ಚಿತ್ರರಂಗದಲ್ಲಿ ಯಶಸ್ಸು ಕಾಣಲು ಸಹಕಾರಿಯಾದ ಕಾಲೇಜು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅನುಭವ ಹಂಚಿಕೊಂಡರು. ಗಾನ ಭಟ್ ಅವರು ವಿದ್ಯಾರ್ಥಿಗಳಿಗೆ ಅವರ ಉತ್ಸಾಹವನ್ನು ಅನುಸರಿಸಲು ಪ್ರೋತ್ಸಾಹಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ವತಿಕಾ ಪೈ ಅವರು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸಮ್ರದ್ಧಿಸಲು ಮತ್ತು ಸಂಬಂಧ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಸ್ವಾಗತಿಸಿದರು. ಎಡಿಫೈ 2022 ರ ಅಧ್ಯಾಪಕ ಸಂಯೋಜಕಿ ನಂದಿತಾ ಸುನಿಲ್ ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಮಹಿಮಾ ಪೈ ವಂದಿಸಿದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಟೆಥರ್ಫಿ ಟೆಕ್ನಾಲಜೀಸ್‌ನ ಜಾಗತಿಕ ಮಾನವ ಸಂಪನ್ಮೂಲ ವ್ಯವಸ್ಥಾಪಕ ಲಕ್ಷ್ಮಣ್ ಶೆಣೈ ಮುಖ್ಯ ಅತಿಥಿಯಾಗಿದ್ದರು. ಮಹಿಳಾ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಮಂಜುಳಾ ಕೆ.ಟಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಣೆಲ್ ಅಣ್ಣಪ್ಪ ನಾಯಕ್ ಮತ್ತು ಆಡಳಿತ ಮಂಡಳಿ ಸದಸ್ಯ ಶ್ಯಾಮಸುಂದರ್ ಕಾಮತ್ ಉಪಸ್ಥಿತರಿದ್ದರು.

ಲಕ್ಷ್ಮಣ್ ಶೆಣೈ ತಮ್ಮ ಭಾಷಣದಲ್ಲಿ, ವ್ರತ್ತಿಜೀವನವು ಸ್ಪರ್ಧಾತ್ಮಕವಾಗಿರುತ್ತದೆ ಆದರೆ ಅದರ ಜೊತೆಗೆ ಅವಕಾಶಗಳೂ ತುಂಬಿರುತ್ತವೆ. ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನಕ್ಕೆ ತಮ್ಮನ್ನು ಉತ್ತಮವಾಗಿ ಸಿದ್ಧಪಡಿಸಿಕೊಳ್ಳಬೇಕು ಮತ್ತು ಉದ್ಯೋಗ ಪಡೆದ ನಂತರ ಕಂಪನಿಯು ನೀಡುವ ಕಾರ್ಪೊರೇಟ್ ತರಬೇತಿಯ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ.ಮಂಜುಳಾ ಕೆ.ಟಿ. ದೇಹ, ಮನಸ್ಸು, ಬುದ್ಧಿ ಮತ್ತು ಚೈತನ್ಯದ ಬೆಳವಣಿಗೆಯ ಮೇಲೆ ಕೇಂದ್ರೀಕರಿಸುವ ಸಮಗ್ರ ಶಿಕ್ಷಣದ ಮೇಲೆ ಒತ್ತು ನೀಡಿದರು.

ಸಹಾಯಕ ಪ್ರಾಧ್ಯಾಪಕಿ ಡಾ.ಶಿಲ್ಪಿ ಸಾಹಾ ಸ್ವಾಗತಿಸಿದರು. ಎಡಿಫೈ 2022 ರ ಅಧ್ಯಾಪಕ ಸಂಯೋಜಕಿ ನಂದಿತಾ ಸುನಿಲ್ ಕಾರ್ಯಕ್ರಮದ ಕುರಿತು ವರದಿಯನ್ನು ನೀಡಿದರು. ಮೊಹಿಯುದ್ದೀನ್ ಹಫ್ಜಲ್ ವಂದಿಸಿದರು. ಪ್ರೀಮಾ ಲಸ್ರಾದೋ ಕಾರ್ಯಕ್ರಮ ನಿರೂಪಿಸಿದರು.

ಸ್ಪರ್ಧೆಗಳ ವಿಜೇತರು:
1. ಮಾರ್ಕೆಟಿಂಗ್ ಸ್ಪರ್ಧೆ: ಶ್ರೀ ಪೂರ್ಣಪ್ರಜ್ಞ ಸಂಜೆ ಕಾಲೇಜು, ಉಡುಪಿ (ಪ್ರಥಮ ಸ್ಥಾನ); ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಮಂಗಳೂರು (ದ್ವಿತೀಯ ಸ್ಥಾನ)
2. ಹಣಕಾಸು ಸ್ಪರ್ಧೆ: ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಮಂಗಳೂರು (ಪ್ರಥಮ ಸ್ಥಾನ); ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು (ದ್ವಿತೀಯ ಸ್ಥಾನ)
3. ರಸಪ್ರಶ್ನೆ ಸ್ಪರ್ಧೆ: ಎಸ್‌ಡಿಎಂ ಕಾಲೇಜು, ಉಜಿರೆ (ಪ್ರಥಮ ಸ್ಥಾನ); ದ್ವಿತೀಯ ಸ್ಥಾನ: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು
4. ಮಾನವ ಸಂಪನ್ಮೂಲ ಸ್ಪರ್ಧೆ: ಎಸ್‌ಡಿಎಂ ಕಾಲೇಜು, ಉಜಿರೆ (ಪ್ರಥಮ ಸ್ಥಾನ); ಗೋವಿಂದ ದಾಸ ಕಾಲೇಜು, ಸುರತ್ಕಲ್ (ದ್ವಿತೀಯ ಸ್ಥಾನ)
5. ಸಾರ್ವಜನಿಕ ಸಂಪರ್ಕ ಸ್ಪರ್ಧೆ: ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಮೂಡಬಿದ್ರಿ (ಪ್ರಥಮ ಸ್ಥಾನ); ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ವಾಮಂಜೂರು (ದ್ವಿತೀಯ ಸ್ಥಾನ)
6. ಅತ್ಯುತ್ತಮ ಮ್ಯಾನೇಜರ್ ಸ್ಪರ್ಧೆ: ವಿವೇಕಾನಂದ ಕಾಲೇಜು, ಪುತ್ತೂರು (ಪ್ರಥಮ ಸ್ಥಾನ)
ಸಮಗ್ರ ಚಾಂಪಿಯನ್ಸ್: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್, ಮಂಗಳೂರು (ಪ್ರಥಮ ಸ್ಥಾನ); ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಮಂಗಳೂರು (ರನ್ನರ್ ಅಪ್).

www.msnim.edu.in

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು