News Karnataka Kannada
Monday, April 29 2024
ಕ್ಯಾಂಪಸ್

ಮೂಡಬಿದಿರೆ: ಜಗತ್ತಿನ ಎಲ್ಲಾ ಧರ್ಮಗಳ ಕೇಂದ್ರ ಬಿಂದು ಭಾರತ – ಭಟ್ಟಾರಕ ಸ್ವಾಮೀಜಿ

Moodabidri: India is the focal point of all religions in the world - Bhattaraka Swamiji
Photo Credit : By Author

ಮೂಡಬಿದಿರೆ: ಭರತ ಭೂಮಿ ಒಂದು ವನದಂತೆ, ಇಲ್ಲಿಎಲ್ಲವೂ ಅರಳಲು, ಪಸರಿಸಲು ವಿಶಾಲವಾದ ಆಗಸದಂತ ಹೃದಯ ವೈಶಾಲ್ಯವಿದೆ. ನಾವು ಎಲ್ಲರೂ ಅಖಂಡ ಭಾರತದ ಕನಸನ್ನು ನನಸು ಮಾಡಲು ಯತ್ನಿಸಬೇಕು.“ನೀನೂ ಬದುಕಿ ಉಳಿದವರನ್ನು ಬದುಕಲು ಬಿಡು” ಎಂಬ ತತ್ವವೇ ಭಾರತೀಯತೆ ಎಂದು ಮೂಡಬಿದ್ರೆ ಜೈನ ಮಠದ ಪರಮ ಪೂಜ್ಯ ಸ್ವಸ್ತೀಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತ ಚಾರ್ಯವರ್ಯ ಸ್ವಾಮೀಜಿಯವರು ಎಕ್ಸಲೆಂಟ್ ವಿದ್ಯಾಸಂಸ್ಥೆಗಳು ಕಲ್ಲಬೆಟ್ಟು, ಮೂಡಬಿದಿರೆಯಲ್ಲಿ ನಡೆದ “ಸರ್ವಧರ್ಮಅರಿವು” ಕಾರ್ಯಕ್ರಮದಲ್ಲಿ ಮಾತನಾಡಿ ಆಶೀರ್ವಚನ ನೀಡಿದರು.

ಮಾನವನು ಹಕ್ಕಿಯಂತೆ ಹಾರಲು ಕಲಿತಿದ್ದಾನೆ, ಮೀನಿನಂತೆ ಈಜುವ ಯಂತ್ರಗಳನ್ನು ಕಂಡು ಹಿಡಿದೆದ್ದಾನೆ, ಅನ್ಯ ಗ್ರಹಗಳಿಗೆ ತಲುಪಿದ್ದಾನೆ ಆದರೆ ನಮಗೆ ಪರಸ್ಪರರನ್ನುಅರಿಯುವಂತಹ ಕೆಲಸವನ್ನು ಕಲಿಸಿಕೊಡುವವರು ಬೇಕಾಗಿದ್ದಾರೆ. ಪರಧರ್ಮ ಸಹಿಸ್ಣುತೆಯೇ ಮಾನವೀಯತೆ. ಮನುಷ್ಯನಿಗೆ ಸಂಸ್ಕಾರವೇ ಶ್ರೇಷ್ಠವಾದದ್ದು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಉತ್ತಮ ವಿಚಾರಗಳಿಂದ ಪರಿಪೂರ್ಣಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕ್ರೈಸ್ತ ಧರ್ಮದ ಕುರಿತು ಉಪನ್ಯಾಸ ನೀಡಿದರೆ| ಫಾ| ಓನಿಲ್ ಡಿ’ಸೋಜಾ, ಧರ್ಮಗುರುಗಳು, ಪ್ಯಾರೀಸ್ ಪ್ರೀಸ್ಟ್ಕೋರ್ಪಸ್ ಕ್ರಿಸ್ಟೀ ಚರ್ಚ್, ಮೂಡಬಿದಿರೆ ಅವರು ಪೋಪ್ ನಿಂದ ಹಿಡಿದು ತಮಗೆ ಕೆಡುಕು ಮಾಡಿದವರ ವಿರುದ್ಧ ಯಾವುದೇ ಸೇಡನ್ನು ತೀರಿಸಿಕೊಳ್ಳದೆ ಅವರಿಗೆ ಕೇಡನ್ನು ಬಯಸದೆ ಕ್ಷಮಾಪಣೆಯನ್ನು ನೀಡಿದ ಅನೇಕ ನಿದರ್ಶನಗಳನ್ನು ನಾವು ಕಂಡಿರುತ್ತೇವೆ.

ಇದಕ್ಕೆ ಪ್ರೇರಣೆಯಾಗಿರುವುದು ಸಾವಿರಾರು ವರ್ಷಗಳ ಹಿಂದೆತನ್ನನ್ನು ಶಿಲುಬೆಗೇರೆಸಿದವರನ್ನು ಕ್ಷಮಿಸುವಂತೆ ಭಗವಂತನಲ್ಲಿ ಕೇಳಿಕೊಂಡ ಏಸು ಸ್ವಾಮಿ. ಇತರರಿಗೆ ಕೆಟ್ಟದನ್ನು ಬಯಸಬಾರದು ದ್ವೇಷಸಾಧನೆಗೋಸ್ಕರ ಕೆಡುಕನ್ನು ಉಂಟು ಮಾಡಿದರೆ ಅದು ಕೆಡುಕಿಗೆ ಒಳಗಾದವರಿಗಿಂತ ಕೆಡುಕನ್ನು ಬಯಸಿದವರಿಗೆ ಹೆಚ್ಚು ಹಾನಿಯನ್ನುಉಂಟುಮಾಡುತ್ತದೆ. ದೇವರನ್ನು ಸಹಮಾನವರನ್ನು ಪ್ರೀತಿಸಬೇಕೆನ್ನುವುದೇ ಕ್ರೈಸ್ತ ಧರ್ಮದ ತಿರುಳು ಎಂದರು.

ಹಿಂದೂ ಧರ್ಮದ ಕುರಿತು ಡಾ ಭಾಸ್ಕರ ವೆಂಕಟರಮಣ ಭಟ್, ಸಂಸ್ಕೃತ ಉಪನ್ಯಾಸಕರು ಮತ್ತು ಪ್ರವಚಕರು ಇವರು ಧರ್ಮ ಎನ್ನುವುದು ನಮ್ಮ ದೃಷ್ಟಿಯಲ್ಲಿ ಅತ್ಯಂತ ಶ್ರೇಷ್ಟವಾದ ಚಿಂತನೆ. ಧರ್ಮದ ಆಳಕ್ಕೆ ಇಳಿದು ಅಂತರಂಗ ಸಂಶೋದನೆ ಮಾಡಿದಾಗ ಸಮಾಜದಲ್ಲಿ ಹೇಗೆ ಬದುಕಬೇಕು ಎಂದು ತಿಳಿಯುತ್ತದೆ. ಪರೋಪಕಾರ ಹಿಂದು ಧರ್ಮದ ಅಂತರಂಗ ಚಿಂತನೆ ಮತ್ತುಜೀವನ ಶೈಲಿ. ಜಗತ್ತಿನ ಹಿತಕೋಸ್ಕರ ಹಿಂದುಧರ್ಮ ನಿರಂತರ ಶ್ರಮಿಸುತ್ತಾಇ ರುತ್ತದೆ. ಆಶ್ರಯ ಬೇಡಿದವರನ್ನು ಭಾರತಯಾವತ್ತೂ ನಿರಾಕರಿಸಲಿಲ್ಲ. ಸಾಮರಸ್ಯದ ಶಿಕ್ಷಣ ಮಗು ತೊಟ್ಟಿಲಲ್ಲಿರುವಾಗಲೇ ಮಗುವಿಗೆ ದೊರಕುವುದು ಧರ್ಮದ ಶ್ರೇಷ್ಠತೆ. ಸಮಾಜಕ್ಕೆ ಹಿತವನ್ನು ಬಯಸುವ ಅಮೂಲ್ಯವಾದ ಬೋಧನೆ ಮಾಡಿದ್ದು ಹಿಂದು ಧರ್ಮ. ಭಾರತ ಚಿಂತನೆ ವಿಶ್ವಮಾನ್ಯವಾಗಿದೆ ಎಂದರು.

ಇಸ್ಲಾಂ ಧರ್ಮದ ಕುರಿತು ಜನಾಬ್‌ ಅಬುಸುಫಿಯಾನ್  ಹೆಚ್ ಐ ಇಬ್ರಾಹಿಂ ಮದನಿ, ಟ್ರಸ್ಟಿ, ಇಸ್ಲಾಮಿಕ್‌ಕಲ್ಚರಲ್ ಸೆಂಟರ್, ಪಂಪ್‌ವೆಲ್, ಮಂಗಳೂರು ಇವರು ಇಸ್ಲಾಂ ಎಂದರೆ ಕೇಳುವುದು ಮತ್ತು ಕೇಳಿ ಅನುಸರಿಸುವುದು. ಅದೊಂದು ದೈವಿಕವಾದಂತಹ ಜೀವನ ಪದ್ದತಿ. ಆ ಪದ್ದತಿ ಬುದ್ದಿವಂತ ಮನುಷ್ಯನನ್ನು ಸಂಸ್ಕೃತಿಯತ್ತ, ಸತ್ಕರ್ಮದತ್ತ ಕೊಂಡೊಯ್ಯುತ್ತದೆ.

ದಿನಕ್ಕೆ ಐದು ಬಾರಿದೇವರ ಸ್ಮರಣೆಯನ್ನು ಮಾಡುವಾಗ ನಮ್ಮನ್ನು ಸತ್ಕರ್ಮದ ದಾರಿಯಲ್ಲಿ ಕೊಂಡೊಯ್ಯು ಎಂದು ಪ್ರಾರ್ಥಿಸುತ್ತೇವೆ. ಇದು ಈ ಜಗತ್ತಿನ ಶ್ರೇಷ್ಠ ಪುರುಷರದಾರಿ. ಮೋಸ ವಂಚನೆಯಿಲ್ಲದೆ ಎಲ್ಲರೊಂದಿಗೆ ಕರುಣೆ ಪ್ರೀತಿತೋರಿ ನಡೆದದಾರಿ. ಇದೇ ಧರ್ಮ ಎಂದರು.

ಸರ್ವಧರ್ಮ ಅರಿವು ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಯುವರಾಜರವರು ಜಗತ್ತಿನ ಹಿತದೊಂದಿಗೆ ನಾವು ಮುನ್ನಡೆಯೋಣ. ಒಳ್ಳೆಯದನ್ನು ಎತ್ತಿ ಹಿಡಿಯುವುದೇಧರ್ಮ. ಧರ್ಮಗಳ ನಡುವಿನ ಬಾಂಧವ್ಯದಕಿಡಿ ವಿದ್ಯಾರ್ಥಿಗಳಲ್ಲಿ ಹಬ್ಬಿ ಸಹೋದರತ್ವದಿಂದ ಸಹಬಾಳ್ವೆ ನಡೆಸುವುದೇ ಮಾನವನ ಕರ್ತವ್ಯ ಎಂದು ತಿಳಿಸಿದರು. ಸರ್ವ ಧರ್ಮಗಳ ಸಾರವೂ ಒಂದೇ ಅದು ಮನುಷ್ಯನ ಆತ್ಮೋದ್ಧಾರ. ಮೇಲು ಕೀಳುಗಳನ್ನು ದಾಟಿ ಶಾಂತಿ, ಪ್ರೀತಿಯಿಂದ ಬದುಕುವುದೇ ಆಗಿದೆ. ದೇವರ ದೃಷ್ಟ್ಠಿಯಲ್ಲಿಎಲ್ಲವೂ ಪವಿತ್ರ ಎಂದು ಭಾವಿಸಬೇಕು ಎಂದು ನುಡಿದರು.

ಪದವಿ ಪೂರ್ವ ಕಾಲೀಜಿನ ಪ್ರಾಂಶುಪಾಲ ಪ್ರದೀಪ್‌ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್‌ ಜೈನ್‌ ಇವರು ಸ್ವಾಗತಿಸಿ, ಮುಖ್ಯೋಪಾಧ್ಯಾಯರು ಶಿವಪ್ರಸಾದ್ ಭಟ್‌ ಇವರು ವಂದಿಸಿದರು. ಡಾ ವಾಧಿರಾಜ್‌ ಕಲ್ಲೂರಾಯ ಇವರು ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು