ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ (ಫಾರ್ಮಸಿ ಪ್ರಾಕ್ಟೀಸ್ ವಿಭಾಗ, ಸಮುದಾಯ ಅಭಿವೃದ್ಧಿ ಸಮಿತಿ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಮಣಿಪಾಲ ಅಸೋಸಿಯೇಷನ್ ಆಫ್ ಫಾರ್ಮಾಸ್ಯುಟಿಕಲ್ ಸ್ಟೂಡೆಂಟ್ಸ್) ಮಣಿಪಾಲದ ಕೆಎಂಸಿಯ ಅರಿವಳಿಕೆ ವಿಭಾಗದ ಸಹಯೋಗದೊಂದಿಗೆ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ಕಾರ್ಖಾನೆ ಉದ್ಯೋಗಿಗಳಿಗೆ ಬೇಸಿಕ್ ಲೈಫ್ ಸಪೋರ್ಟ್ (ಬಿಎಲ್ಎಸ್) ಕಾರ್ಯಕ್ರಮವನ್ನು ಮಾರ್ಚ್ 17, 20203 ರಂದು ಆಯೋಜಿಸಿತ್ತು.
ಮಣಿಪಾಲದ ಕೆಎಂಸಿಯ ಅರಿವಳಿಕೆ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರಮಾಣೀಕೃತ ಎಎಚ್ಎ ಬಿಎಲ್ಎಸ್ ಮತ್ತು ಎಸಿಎಲ್ಎಸ್ ಬೋಧಕರಾದ ಡಾ.ಸುಷ್ಮಾ ಟಿ.ಕೆ ಅವರು ಕಾರ್ಖಾನೆಯ 25 ಉದ್ಯೋಗಿಗಳಿಗೆ ಹೃದಯ ಸ್ತಂಭನ ಮತ್ತು ಉಸಿರುಗಟ್ಟುವಿಕೆಯ ನಿರ್ವಹಣೆಯ ಬಗ್ಗೆ ಪ್ರಥಮ ಚಿಕಿತ್ಸಾ ತರಬೇತಿ ನೀಡಿದರು.
ಎಂಸಿಓಪಿಎಸ್ ನ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಪೂಜಾ ಗೋಪಾಲ್ ಪೂಜಾರಿ ಸ್ವಾಗತಿಸಿದರು. ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ವಿದ್ಯಾ ಗೋಮ್ಸ್ ರವರು ಡಾ.ಸುಷ್ಮಾ ಅವರಿಗೆ ನೆನಪಿನ ಕಾಣಿಕೆ ನೀಡಿದರು.
ಮಣಿಪಾಲದ ಎಂಸಿಒಪಿಎಸ್ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಡಾ.ಪ್ರಸನ್ನ ಕುಮಾರ್ ಮತ್ತು ಡಾ.ಶ್ರೀಧರನ್ ಕಾರ್ಯಕ್ರಮ ಸಂಯೋಜಿಸಿದರು.