ಮಂಗಳೂರು: ಇಲ್ಲಿನ ಬಿಜೈ ಬಳಿ ಇರುವ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಇದರ ಸಿಲ್ವರ್ ಜುಬಿಲಿ ಬ್ಲಾಕನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಲೂರ್ಡ್ಸ್ ಸೆಂಟ್ರಲ್ ಸ್ಕೂಲಿನ ಸಿಲ್ವರ್ ಜುಬಿಲಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಈ ಸಿಲ್ವರ್ ಜುಬ್ಲಿ ಬ್ಲಾಕ್ ಅನ್ನು ಎನ್ನಾರೈ ಮೈಕಲ್ ಡಿಸೋಜಾ ದಂಪತಿಗಳು ಮತ್ತು ಬಿಷಪ್ ಪೀಟರ್ ಪೌಲ್ ಸಲ್ದಾನ ಜಂಟಿಯಾಗಿ ಉದ್ಘಾಟಿಸಿದರು.
ಈ ಸರಳ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಬಿಷಪ್ ಪೀಟರ್ ಪೌಲ್ ಸಲ್ದಾನ ,ರೆವರೆಂಡ್ ಫಾದರ್ ಆ್ಯಂಟೊನಿ ಸೆರಾ ,ಮೈಕಲ್ ಡಿಸೋಜಾ ,ಫ್ಲಾವಿಯಾ ಡಿಸೋಜ ,ಫಾ ಜೆ ಬಿ ಸಲ್ದಾನ .,ರಾಬರ್ಟ್ ಡಿಸೋಜಾ ಪ್ರೀತಿ ,ವೆಲೇರಿಯನ್ ಡಿಸೋಜ , ಜಾನ್ ಬ್ಯಾಪ್ಟಿಸ್ಟ್ ಸಲ್ದಾನ ಮತ್ತಿತರರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮೈಕಲ್ ಡಿಸೋಜ ಎನ್ನಾರೈ ಮತ್ತು ಫ್ಲೇವಿ ಡಿಸೋಜಾ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಮೈಕಲ್ ಡಿಸೋಜ ದಂಪತಿಗಳು ಸಿಲ್ವರ್ ಜ್ಯೂಬಿಲಿ ಕಟ್ಟಡಕ್ಕೆ ಅನುದಾನ ಒದಗಿಸದ ಹಿನ್ನೆಲೆಯಲ್ಲಿ ಸಮ್ಮಾನಿಸಲಾಯಿತು. ಬಳಿಕ ಮೈಕಲ್ ಡಿಸೋಜ ಅವರು ಸಂಸ್ಥೆಗೆ ಮತ್ತು ನೂತನ ಕಟ್ಟಡಕ್ಕೆ ಶುಭಹಾರೈಸಿದರು. ಬಳಿಕ ಮಾತನಾಡಿದ ಬಿಷಪ್ ಪೀಟರ್ ಪೌಲ್ ಸಲ್ದಾನ ಸಂಸ್ಥೆಗೆ ಶುಭ ಹಾರೈಸಿ ಆಶೀರ್ವಚನ ನೀಡಿದರು.