News Karnataka Kannada
Sunday, April 28 2024
ಮಂಗಳೂರು

ಭೂಗತ ಮಾರ್ಗ ಬಹುತೇಕ ಪೂರ್ಣ: ಮಂಗಳೂರು ತಾಲ್ಲೂಕು ಕಚೇರಿ ಮುಂಭಾಗ 7ಕೋಟಿ ವೆಚ್ಚದ ಕಾಮಗಾರಿ

Mnglr
Photo Credit : By Author

ಮಂಗಳೂರು: ನಗರದ ಕ್ಲಾಕ್ ಟವರ್ ವೃತ್ತ ದ ಬಳಿ ಬಹುಕಾಲದಿಂದ ನಿರೀಕ್ಷೆಯಾಗಿಯೇ ಉಳಿದಿದೆ ಪಾದಚಾರಿ ಭೂಗತ ಮಾರ್ಗ ಅಂಡರ್ ಪಾಸ್ ಕಾಮಗಾರಿ ಶೇಕಡಾ 90 ರಷ್ಟು ಪೂರ್ಣಗೊಂಡಿವೆ. ಮಂಗಳೂರು ತಾಲ್ಲೂಕು ಕಚೇರಿ ಮುಂಭಾಗದಿಂದ ಗಾಂಧಿ ಉದ್ಯಾನವನ ತನಕ 30ಮೀಟರ್ ಉದ್ದ ಹಾಗೂ 10 ಮೀಟರ್ ಅಗಲದ ಭೂಗತ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ.

ಗಾಂಧಿ ಉದ್ಯಾನವನದಿಂದ ಹೋಟೆಲ್ ತಾಜ್ ಮಹಲ್ ತನಕ 26 ಮೀಟರ್ ಉದ್ದ ಹಾಗೂ ಹತ್ತು ಮೀಟರ್ ಅಗಲದ ಮಾರ್ಗ ಶೇಕಡ ತೊಂಬತ್ತು ರಷ್ಟು ಪೂರ್ಣಗೊಂಡಿದೆ. ಒಟ್ಟು 7ಕೋಟಿ₹ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ .

ಗಾಂಧಿ ಉದ್ಯಾವನದ ಪಾದಚಾರಿ ಮಾರ್ಗದಲ್ಲಿ ನೆಲಹಾಸು ಕಾರ್ಯ ಪ್ರಗತಿಯಲ್ಲಿದ್ದು ಉದ್ಯಾವನದ ಆವರಣಗೋಡೆ ನೀರಾವರಿ ಹಾಗೂ ವಿದ್ಯುತ್ ಕೆಲಸಗಳು ಹಾಗೂ ತೋಟಗಾರಿಕೆಯ ಪೂರ್ವ ಸಿದ್ಧತಾ ಕಾಮಗಾರಿ ಪ್ರಗತಿಯಲ್ಲಿದೆ. 2ತಿಂಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. 2ವರ್ಷಗಳಿಂದ ಹಂತ ಹಂತವಾಗಿ ಕಾಮಗಾರಿ ನಡೆದಿದೆ ,ಮಂದಗತಿಯ ಕೆಲಸದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕೋವಿಡ್ ಲೊಕ್ಡೌನ್ ಹಾಗೂ ಮಳೆಗಾಲದ ಅವಧಿಯಲ್ಲಿ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯದಿರುವುದು ಕೆಲಸ ಪೂರ್ಣಗೊಳ್ಳುವಲ್ಲಿ ವಿಳಂಬಕ್ಕೆ ಕಾರಣವಾಗಿತ್ತು. ಪ್ರತಿದಿನ ರೈಲು ನಿಲ್ದಾಣದಿಂದ ನಗರಕ್ಕೆ ಬರುವ ಸಾವಿರಾರು ಸಾರ್ವಜನಿಕರಿಗೆ ಈ ಪಾದಚಾರಿ ಭೂಗತ ಮಾರ್ಗ ಉಪಯೋಗವಾಗಲಿದೆ . ಹಿಂದೆ ಇಲ್ಲಿ ರಸ್ತೆ ದಾಟುವುದು ಹರಸಾಹಸವಾಗಿತ್ತು ಮಹಿಳೆಯರು ಹಿರಿಯರು ರಸ್ತೆ ದಾಟಲು ಜೀವ ಕೈಯಲ್ಲಿ ಹಿಡಿದು ಕೊಳ್ಳಬೇಕಾದ ಸ್ಥಿತಿ ಇತ್ತು , ಸ್ಕೈವಾಕ್ ಅಥವಾ ಭೂಗತ ಮಾರ್ಗ ನಿರ್ಮಾಣ ಮಾಡಬೇಕೆನ್ನುವ ಬೇಡಿಕೆ ದಶಕದಿಂದ ಇತ್ತು , ಈ ಹಿಂದೆ ಸ್ಕೈ ವಾಕ್ ಮಾಡಲು ಯೋಜನೆ ರೂಪಿಸಿ ಟೆಂಡರ್ ಪ್ರಕ್ರಿಯೆ ನಡೆದು ಅಂದಿನ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಶಿಲಾನ್ಯಾಸವನ್ನು ನೆರವೇರಿಸಿದರು .ಆದರೆ ಬಳಿಕ ಈ ಯೋಜನೆಯ ನಿರ್ವಹಣಾ ವೆಚ್ಚ ಅಧಿಕವಾದ ಕಾರಣ ರದ್ದಾಯಿತು . ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪ್ರಸ್ತುತ ಪಾದಚಾರಿ ಭೂಗತ ಮಾರ್ಗದ ಕನಸು ನನಸಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು