ಕುಂದಾಪುರ: ಎಂಐಟಿಕೆ ವಿದ್ಯಾರ್ಥಿಗಳ ಪ್ರಾಜೆಕ್ಟ್‍ಗೆ ಕೆಎಸ್‍ಸಿಟಿ ಅನುದಾನ

ಕುಂದಾಪುರ: ಮೂಡ್ಲಕಟ್ಟೆ ಎಂಜಿನಿಯರಿಂಗ್ ಕಾಲೇಜು ಕುಂದಾಪುರ ಇದರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಮೂರು ಪ್ರಾಜೆಕ್ಟ್ ಪ್ರಸ್ತಾವನೆಗಳು ಕೆಎಸ್‍ಸಿಟಿಯ 2022-23ನೇ ಸಾಲಿನ ಅನುದಾನ ಪಡೆಯಲು ಆಯ್ಕೆಯಾಗಿವೆ.

ಎಲೆಕ್ಟ್ರಾನಿಕ್ಸ್ ವಿಭಾಗದ ಸುಮನ್ ಕಾನ್ ಆರ್. ಬಾಗೇವಾಡಿ, ಪ್ರಥಮ್ ರಾಜೇಶ್ ರಾಯ್ಕರ್, ವೀರೇಂದ್ರ ಪಿ. ಗೌಡರ್, ರಘು ಬಿ. ನಾಯ್ಕರ್ `ಐಒಟಿ ಬಳಸಿ ಟ್ರಾನ್ಸ್‍ಫಾರ್ಮರ್ ಹೆಲ್ತ್ ಮಾನಿಟರಿಂಗ್ ಸಿಸ್ಟಮ್’ ಎಂಬ ಯೋಜನೆ ಆಯ್ಕೆಯಾಗಿದೆ.

ಅಮರ್ ಸಿ.ಬಾಲಗಾಂವ್, ಅನಿಲ್ ಎನ್.ಟಿ., ಚಂದನ್ ಕುಮಾರ್ ಸಿ.ಎನ್., ವಿಷ್ಣುಮೂರ್ತಿ ನಾಯಕ್ ಅವರು `ಕುಂದಾಪುರ ಪುರಸಭೆಯಲ್ಲಿ ಘನತ್ಯಾಜ್ಯ ನಿರ್ವಾಹಕರಿಗೆ ಸ್ವಯಂಚಾಲಿತ ಘನ ತ್ಯಾಜ್ಯ ವಿಂಗಡಣೆ ವ್ಯವಸ್ಥೆ’ ಎಂಬ ಪ್ರಾಜೆಕ್ಟ್ ತಯಾರಿಸಿದ್ದು, ಈ ಪ್ರಾಜೆಕ್ಟ್ ರಾಷ್ಟ್ರ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಉತ್ತಮ ಭವಿಷ್ಯದ ತಂತ್ರಜ್ಞಾನ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಪ್ರಜ್ವಲ್ ಸುರೇಂದ್ರ ನಾಯ್ಕ್, ಸುಷ್ಮಾ ಜಿ., ನವ್ಯಾ ಎಂ., ದೀಪಕ್ ಅವರು `ಮಣ್ಣಿನಲ್ಲಿರುವ ಸಾರಜನಕ, ರಂಜಕ, ಹಾಗೂ ಪೊಟಾಶಿಯಮ್ ಒಟ್ಟಿಗೆ ನೀರಿನ ಪ್ರಮಾಣವನ್ನು ಸೆನ್ಸಾರ್ ಉಪಯೋಗಿಸಿ ಪತ್ತೆ ಹಚ್ಚುವುದು ಮತ್ತು ಸಸ್ಯಗಳ ರೋಗವನ್ನು ಸಿಎನ್ ಎನ್ ಹಾಗೂ ಯುಐ ಪಾತ್ ಸಹಾಯದಿಂದ ಪತ್ತೆಹಚ್ಚುವ’ ಪ್ರಾಜೆಕ್ಟ್ ತಯಾರಿಸಿದ್ದರು.

Ashika S

Recent Posts

ಬೀದರ್‌ನ ’14 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್‌’ ಪರೀಕ್ಷೆ

'ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಜಿಲ್ಲೆಯ 14 ಪರೀಕ್ಷಾ ಕೇಂದ್ರಗಳಲ್ಲಿ ಮೇ 5ರಂದು ನಡೆಯಲಿದೆ' ಎಂದು ನೀಟ್‌ ಸಂಯೋಜಕ…

23 mins ago

ಮೋದಿ ಬಂದರೂ ಮಾದಿಗರು ಬಿಜೆಪಿ ಬೆಂಬಲಿಸಲ್ಲ: ಚಂದ್ರಕಾಂತ ಹಿಪ್ಪಳಗಾಂವ

ತೆಲಂಗಾಣದ ಮಂದಾಕೃಷ್ಣ ಮಾದಿಗ ಅಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಂದರೂ ಮಾದಿಗರು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಪರಿಶಿಷ್ಟ…

29 mins ago

ಮಳೆ, ಗಾಳಿ ಆರ್ಭಟಕ್ಕೆ ಧರೆಗುರುಳಿದ ಏಸು ಕ್ರೈಸ್ತನ ಮೂರ್ತಿ

ಬೀಸಿದ ಗಾಳಿಗೆ ಸುರಿದ ಮಳೆಯ ರಭಸಕ್ಕೆ ಏಸು ಕ್ರೈಸ್ತನ ಮೂರ್ತಿ ಧರೆಗುರುಳಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮರಿ…

36 mins ago

ಶರೀರದ ದಾಹ, ಬಾಯಾರಿಕೆ ನಿವಾರಣೆಗಾಗಿ ಚಿಂಚಾ ಪಾನಕ ಬಳಸಿ: ಡಾ.ಶುಭ ರಾಜೇಶ್

ಬೇಸಿಗೆ ಕಾಲದಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು. ಜೀರ್ಣಕ್ರಿಯೆ ಉತ್ತಮಗೊಳಿಸಲು ಶರೀರದ ದಾಹ ನಿವಾರಣೆಗಾಗಿ ಆರೋಗ್ಯಕರ…

51 mins ago

ರಾಜು ಆಲಗೂರರಿಗೆ ಕುರುಬ ಸಮಾಜದ ಬೆಂಬಲ: ಮಲ್ಲಪ್ಪ ಸಾಲಿ

ಕುರುಬ ಸಮಾಜ ಯಾವತ್ತೂ ನ್ಯಾಯದ ಪರವಾಗಿದೆ. ಹಾಗಾಗಿ ಯೋಗ್ಯ ಅಭ್ಯರ್ಥಿಯಾದ ರಾಜು ಆಲಗೂರರಿಗೆ ಬೆಂಬಲ ನೀಡುತ್ತದೆ ಎಂದು ಮಾಜಿ ಜಿಪಂ…

1 hour ago

ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು

ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಬೇಸಗೆಯಲ್ಲಂತೂ ಆಗಾಗ ಸಲಾಡ್‌ಗಳ ರೂಪದಲ್ಲಾದರೂ ಹಸಿ ಈರುಳ್ಳಿ ಬಳಸಬೇಕು.

1 hour ago