Categories: ಹಾಸನ

ಅರಸೀಕೆರೆ: ಸಾರ್ವಜನಿಕರ ಕೆಲಸ ವಿಳಂಬವಾದರೆ ನಿರ್ದಾಕ್ಷಿಣ್ಯ ಕ್ರಮ

ಅರಸೀಕೆರೆ: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಅನಗತ್ಯವಾಗಿ ವಿಳಂಬವಾಗದಂತೆ ನೋಡಿಕೊಳ್ಳಿ ಒಂದು ವೇಳೆ ಸಾರ್ವಜನಿಕರಿಂದ ದೂರು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶಿವಲಿಂಗೇಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ತಾಲೂಕು ಪಂಚಾಯಿತಿಯ ಕಚೇರಿ ಆವರಣದಲ್ಲಿ ನಡೆದ ಟಾಸ್ ಸ್ಪೋರ್ಟ್ಸ್ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳ ಉದ್ದೇಶಿಸಿ ಮಾತನಾಡಿದ ಅವರು ಮಳೆ ಹಾನಿ ಪರಿಹಾರ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳು ಮಾಡಿಕೊಡುತ್ತಿಲ್ಲ ಎಂದು ಪ್ರತಿದಿನ ನೂರಾರು ಮಂದಿ ನಮ್ಮ ಮನೆ ಹಾಗೂ ಕಚೇರಿಗೆ ಬರುತ್ತಿದ್ದಾರೆ ಅಧಿಕಾರಿಗಳು ಏನು ಮಾಡುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುವಂತೆ ತಾಕಿತ್ತು ಮಾಡಿದರು.

ಕಳೆದ ವರ್ಷ ಸುರಿದ ಅತಿವೃಷ್ಟಿ ಮಳೆಯಿಂದ ಹಾನಿ ಅನುಭವಿಸಿರುವ ನಿರಾಶ್ರಿತರು ಸರ್ಕಾರದಿಂದ ದೊರೆಯುವ ಅನುದಾನಕ್ಕೆ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ ಏಕೆ ಅವರಿಗೆ ದೊರೆಯಬೇಕಾದ ಅನುದಾನ ಇನ್ನು ಕೈ ಸೇರಿಲ್ಲ ಎಂದು ತಹಸಿಲ್ದಾರ್ ವಿಭಾ ವಿದ್ಯ ರಾಥೋಡ್ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್ ಅವರನ್ನು ಶಾಸಕರು ಪ್ರಶ್ನಿಸಿದ್ದರು ಇದಕ್ಕೆ ತಹಸಿಲ್ದಾರ್ ಪ್ರತಿಕ್ರಿಯಿಸಿ ಮಳೆ ಹಾನಿಯಿಂದ ನಷ್ಟ ಅನುಭವಿಸಿರುವ ಫಲಾನುಭವಿಗಳ ಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳಿಗೆ ಕಳಿಸಿಕೊಡಲಾಗಿದ್ದು ಅಂದಾಜು ನಷ್ಟ ೭೫ ಲಕ್ಷ ಈ ಪೈಕಿ ೨೭ ಲಕ್ಷದ ೭೫,೦೦೦ ಮಾತ್ರ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು ಪರಿಹಾರ ವಿಳಂಬ ಕುರಿತು ಅಸಮಾಧಾನ ಗೊಂಡ ಶಾಸಕ ಶಿವಲಿಂಗೇಗೌಡ ಈ ಸಂಬಂಧ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ನಿರಾಶ್ರಿತರಿಗೆ ದೊರೆಯಬೇಕಾಗಿರುವ ಪರಿಹಾರ ವಿಳಂಬ ಕುರಿತು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಕೂಡಲೇ ಪರಿಹಾರದ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ನಿರಾಶ್ರಿತರ ಮನೆ ನಿರ್ಮಾಣ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಮಾಹಿತಿ ಪಡೆದುಕೊಂಡ ಶಾಸಕರು ಕೆಲವು ಫಲಾನುಭವಿಗಳ ಮನೆ ನಿರ್ಮಾಣದ ಮೊದಲನೇ ಕಂತಿನ ಹಣ ಪಡೆದರು ಏಕೆ ಕಾಮಗಾರಿಯನ್ನು ಕೈಗೊಂಡಿಲ್ಲ ಎಂಬ ಕುರಿತು ಸ್ಥಳೀಯ ಪಿಡಿಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕಳಿಸಿ ಮಾಹಿತಿ ಪಡೆದು ಮನೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಾಪಂ ಕಾರ್ಯ ನಿರ್ವಾಹ ಅಧಿಕಾರಿ ನಾಗರಾಜ್ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮುಂಗಾರು ಮಳೆ ತಾಲೂಕಿನಲ್ಲಿ ಯಾವ ಪ್ರಮಾಣದಲಾಗಿದೆ ಹಾಗೂ ಮಳೆ ಬೆಳೆ ಕುರಿತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಕೆಲವು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ನಾನಾ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Ashika S

Recent Posts

ಇ.ಡಿ ಬಂಧನ : ನ್ಯಾಯಕ್ಕಾಗಿ ಸುಪ್ರೀಂ ಮೆಟ್ಟಿಲೇರಿದ ಹೇಮಂತ್ ಸೊರೆನ್

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಬಂಧನದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಜಾರ್ಖಂಡ್‌ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಜಾರ್ಖಂಡ್…

1 min ago

ಕಿಡ್ನಾಪ್​ ಕೇಸ್ ನಲ್ಲಿ ಭವಾನಿ ರೇವಣ್ಣ ಹೆಸರು ಉಲ್ಲೇಖಿಸಿದ ಸಂತ್ರಸ್ತೆಯರು

ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್​ ಕೇಸ್​ಗೆ ಸಂಬಂಧಿಸಿದಂತೆ ಸಂತ್ರಸ್ತೆಯರು ಎಸ್​​ಐಟಿ ಬಳಿ  ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ ಎನ್ನುವ…

15 mins ago

ಅತ್ಯಾಚಾರ ಪ್ರಕರಣ: ರೇವಣ್ಣನ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು ಎಸ್‌ಐಟಿ ಅಧಿಕಾರಿಗಳು

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಬಸವನಗುಡಿಯಲ್ಲಿರುವ ಎಚ್‌.ಡಿ.ರೇವಣ್ಣ ಅವರ ಮನೆಗೆ ಸಂತ್ರಸ್ತೆಯನ್ನು ಕರೆದೊಯ್ದು…

22 mins ago

ರಾಯ್‌ಬರೇಲಿಗೆ ಬಘೇಲ್‌, ಅಮೇಠಿಗೆ ಅಶೋಕ್‌ ಗೆಹಲೋತ್‌ ವೀಕ್ಷಕರಾಗಿ ನೇಮಕ

ಉತ್ತರ ಪ್ರದೇಶದ ಪ್ರತಿಷ್ಠಿತ ಲೋಕಸಭಾ ಕೇತ್ರಗಳಾದ ರಾಯ್‌ಬರೇಲಿ ಮತ್ತು ಅಮೇಠಿಗೆ ಕಾಂಗ್ರೆಸ್‌ ಹೈಕಮಾಂಡ್‌ ವೀಕ್ಷಕರನ್ನು ನೇಮಕ ಮಾಡಿದೆ.

33 mins ago

ಬಿಲ್ಲವ Vs ಬಂಟ; ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಟ್ಟಿಂಗ್ ದಂಧೆ

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತದಾನ ಈಗಾಲೇ ಪೂರ್ಣಗೊಂಡಿದೆ. ಇತ್ತ ಗೆಲುವಿನ ಲೆಕ್ಕಾಚಾರದಲ್ಲಿ ರಾಜಕೀಯ ಪಕ್ಷಗಳು ನಿರತವಾಗಿದೆ. ಮತ್ತೊಂದು ಕಡೆ ಐಪಿಎಲ್…

34 mins ago

ಸಿಟ್ಟಿನಲ್ಲಿ ಕಪಾಳ ಮೋಕ್ಷ: ವ್ಯಕ್ತಿ ಮೃತ್ಯು

ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಿಟ್ಟಾಗಿ ಕಪಾಳಕ್ಕೆ ಹೊಡೆದಿದ್ದರಿಂದ ಮೃತಪಟ್ಟ ಘಟನೆ ಬೆಂಗಳೂರಿನ ಕಾಡುಗೋಡಿ ಠಾಣಾ ವ್ಯಾಪ್ತಿಯ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ.

40 mins ago