Categories: ವಿಜಯಪುರ

ರಾಜು ಆಲಗೂರರಿಗೆ ಕುರುಬ ಸಮಾಜದ ಬೆಂಬಲ: ಮಲ್ಲಪ್ಪ ಸಾಲಿ

ವಿಜಯಪುರ: ಕುರುಬ ಸಮಾಜ ಯಾವತ್ತೂ ನ್ಯಾಯದ ಪರವಾಗಿದೆ. ಹಾಗಾಗಿ ಯೋಗ್ಯ ಅಭ್ಯರ್ಥಿಯಾದ ರಾಜು ಆಲಗೂರರಿಗೆ ಬೆಂಬಲ ನೀಡುತ್ತದೆ ಎಂದು ಮಾಜಿ ಜಿಪಂ ಅಧ್ಯಕ್ಷ ಹಾಗೂ ಜಿಲ್ಲೆಯ ಕುರುಬ ಸಮಾಜದ ಮುಖಂಡ ಮಲ್ಲಪ್ಪ ಸಾಲಿ ಹೇಳಿದರು.

ಅವರು ಶುಕ್ರವಾರ ಸಿಂದಗಿಯಲ್ಲಿ ನಡೆದ ಕುರುಬ ಸಮುದಾಯದ ಬೃಹತ್ ಸಭೆಯಲ್ಲಿ ಮಾತನಾಡಿದರು. ಆಲಗೂರರು ಚಳವಳಿ, ಹೋರಾಟದಿಂದ ಬಂದವರು. ನಮ್ಮಂತಹ ತಳ ಸಮುದಾಯದ ಜೊತೆ ಅವರು ಮೊದಲಿಂದ ಬೆರೆತಿದ್ದಾರೆ. ಅಹಿಂದ ಚಳವಳಿಗೆ ಅವರು ಬೆನ್ನೆಲುಬಾಗಿದ್ದರು. ಹಾಗಾಗಿ ನಮ್ಮ ಸಮುದಾಯ ಅವರ ಗೆಲುವಿಗೆ ಸಹಕರಿಸಬೇಕು ಎಂದು ಕೋರಿದರು.

ರಾಜ್ಯ ಸರಕಾರದ ಸಾಧನೆಗೆ ಕಾರಣರಾಗಿರುವ ಸಿದ್ದರಾಮಯ್ಯರ ಕೈಬಲಪಡಿಸಲು ಆಲಗೂರರಿಗೆ ಮತ ಹಾಕಬೇಕು. ಜಾತಿ ರಹಿತ ಸಮಾಜಕ್ಕಾಗಿ ನಾವು ಒಟ್ಟಾಗಬೇಕು. ಲೋಕಸಭೆ ಕ್ಷೇತ್ರದಲ್ಲಿ ಈ ಸಲ ಬದಲಾವಣೆ ತರಲು ಕುರುಬ ಸಮಾಜ ಕಾರಣವಾಗಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಮಾತನಾಡಿ, ಕುರುಬ ಸಮಾಜ ಒಟ್ಟಾಗಿ ಸಭೆ ನಡೆಸಿದ್ದು ಸಂತೋಷ. ದೇಶಕ್ಕೆ ಒಳ್ಳೆಯದಾಗಲು ಈ ಸಭೆ ಮಹತ್ವದ್ದಾಗಿದೆ. ರಾಜ್ಯದಲ್ಲಿ ನಾವು ಗೆದ್ದಂತೆ ದೇಶದ ಚುನಾವಣೆಯಲ್ಲೂ ನಾವು ಗೆಲ್ಲಬೇಕು.  ಸಮರ್ಥ ಅಭ್ಯರ್ಥಿ ಆಲಗೂರರಿಗೆ ಮತ ನೀಡಬೇಕು ಎಂದರು.

ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಮಾತನಾಡಿ, ನಾನು ಲೋಕಸಭೆಗೆ ಸ್ಪರ್ಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣ. ಅವರೇ ನನಗೆ ಟಿಕೆಟ್ ನೀಡಿದ್ದಾರೆ. ಕರ್ನಾಟಕದಲ್ಲಿ ಹಾಲು ಮತ ಸಮುದಾಯ ರಾಜ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು.

ಶಾಸಕ ಅಶೋಕ ಮನಗೂಳಿ ಮಾತನಾಡಿ, ಇದು ಮಹತ್ವದ ಚುನಾವಣೆ. ದೇಶ ಉಳಿಸುವ ಹೋರಾಟವಿದು. ಕಾಂಗ್ರೆಸ್ ಮಾಡಿದ ಕೆಲಸಗಳಿಗಾಗಿ ನಡೆದಿರುವ ಚುನಾವಣೆ ಇದಾಗಿದೆ. ಮೋದಿ ಹೇಳಿರುವುದು ಯಾವುದೂ ಆಗಿಲ್ಲ ಎಂದರು.

ಮಾಜಿ ಶಾಸಕರಾದ ಶರಣಪ್ಪ ಸುಣಗಾರ ಮಾತನಾಡಿ, ಇದು ಸತ್ಯ-ಅಸತ್ಯದ, ಧರ್ಮ-ಅಧರ್ಮದ ನಡುವಿನ ಚುನಾವಣೆ. ದೇಶದಲ್ಲಿ ಕೆಟ್ಟ ಆಡಳಿತದಿಂದ ಕರಾಳ ಛಾಯೆ ಆವರಿಸಿದೆ. ಮೋದಿ ಮುಖ ನೋಡಿ ಯಾಕೆ ಮತ ಹಾಕಬೇಕು. ಅಭಿವೃದ್ಧಿಯ ಹರಿಕಾರ ಸಿದ್ದರಾಮಯ್ಯರ ಮುಖ ನೋಡಿ ಮತ ಹಾಕುವ ಅಗತ್ಯ ಇದೆ ಎಂದು ಹೇಳಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರ ಬಾಳು ಬೆಳಗಲಿದೆ. ರಾಜ್ಯದಂತೆ ದೇಶದಲ್ಲೂ ಗ್ಯಾರಂಟಿಗಳ ಯೋಜನೆ ಜಾರಿಗೆ ಬರಲಿವೆ. ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಗ್ಯಾರಂಟಿಗಳ ಭಾಗ್ಯದಿಂದ ಅವರು ಒಂದಿಷ್ಟಾದರೂ ಉಸಿರಾಡುವಂತಾಗಿದೆ ಎಂದರು.

ಬೀರಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಎಸ್.ಎಂ.ಪಾಟೀಲ ಗಣಿಹಾರ, ಕೆ.ಡಿ. ಪೂಜಾರಿ, ಶ್ರೀನಿವಾಸ ಪೂಜಾರಿ, ಅಪ್ಪಾಸಾಹೇಬ ಯರನಾಳ, ವಿಠ್ಠಲ ಕೊಳ್ಳೂರ, ರುಕ್ಸಾನಾ ಉಸ್ತಾದ, ರಮೇಶ ಬಂಟನೂರ, ಸಾದಿಕ್ ಸುಂಬಡ, ಸಂಗೀತಾ, ಮಹೇಶ್ಚಂದ್ರ ಯಂಕಂಚಿ, ತಳವಾರ ಸಮಾಜದ ರಾಜ್ಯ ಅಧ್ಯಕ್ಷ ಸಿದ್ದರಾಮ‌ ಜೇರಟಗಿ, ಕಾಮೆಶ ಉಕ್ಕಲಿ ಅನೇಕರಿದ್ದರು.

Chaitra Kulal

Recent Posts

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 10 ಮಂದಿ ಸಜೀವ ದಹನ

ಬಸ್‌ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ  ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ…

13 mins ago

11 ತಿಂಗಳಿನಲ್ಲಿ ಬರೋಬ್ಬರಿ 5.38 ಕೋಟಿ ದಂಡ ವಸೂಲಿ ಮಾಡಿದ ಬಿಎಂಆರ್‌ಸಿಎಲ್‌

ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್‌ಸಿಎಲ್‌ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…

43 mins ago

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

59 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

1 hour ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

2 hours ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

2 hours ago