News Karnataka Kannada
Sunday, May 05 2024
ಮಂಗಳೂರು

ಮಂಗಳೂರು: ಶಕ್ತಿ ಪ.ಪೂ ಕಾಲೇಜಿನಲ್ಲಿ ಕ್ಯಾನ್ಸರ್  ರೋಗಿಗಳಿಗಾಗಿ ಕೇಶದಾನ ಕಾರ್ಯಕ್ರಮ

Hair Donation Program for Cancer Patients at Shakti PU College by Seeds of Hope
Photo Credit : News Kannada

ಮಂಗಳೂರು, ಸೆ.11: ಶಕ್ತಿನಗರದ ಶಕ್ತಿ ಪಪೂ ಕಾಲೇಜಿನ ಸಹಯೋಗದೊಂದಿಗೆ “ಸೀಡ್ಸ್ ಆಪ್ ಹೋಪ್” ಮುಳಿಯ ಫೌಂಡೇಶನ್‌ ಕೇಶದಾನ ಕಾರ್ಯಕ್ರಮವನ್ನು ಆಯೋಜಿಸಿತು. ಜೀವನ ಕೌಶಲ ತರಬೇತುಗಾರ್ತಿ ವಂದನಾ ಕಾಮತ್ ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದಅವರು ನಮ್ಮಲ್ಲಿ ಧೈರ್ಯ ಮತ್ತುಆತ್ಮಸ್ಥೈರ್ಯ ಇದ್ದಾಗ ಕ್ಯಾನ್ಸರ್‌ನ್ನು ಗೆದ್ದು ಬರಬಹುದೆಂದು ಅವರ ಅನುಭವವನ್ನು ಹಂಚಿಕೊಂಡರು.

ಕ್ಯಾನ್ಸರ್‌ ಚಿಕಿತ್ಸೆಯ ಸಂದರ್ಭದಲ್ಲಿ ಕಿಮೋ ಥೆರಪಿ ಮಾಡಬೇಕಾಗುತ್ತದೆ. ಆಗ ಜೀವಕೋಶಗಳು ನಾಶವಾಗಿ ಕೂದಲು ಉದುರುತ್ತದೆ. ಆಗ ವಿಗ್‌ನ ಅವಶ್ಯಕತೆ ಇದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಫಾದರ್ ಮುಲ್ಲರ್‌ ಆಸ್ಪತ್ರೆಯ ಸರ್ಜಿಕಲ್‌ ಆಂಕಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ರೋಹನ್‌ಗಟ್ಟಿ ಮಾತನಾಡಿ ಕ್ಯಾನ್ಸರ್‌ ರೋಗಿಯು ಧೈರ್ಯ ಕಳೆದುಕೊಳ್ಳಬಾರದು ಇದಕ್ಕೆ ಮೂರು ಘಟ್ಟಗಳಲ್ಲಿ ಪ್ರಮುಖವಾದ ಚಿಕಿತ್ಸೆ ಕಿಮೋಥೆರಪಿ. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಾಗ ಕೂದಲು ಪೂರ್ತಿ ಉದುರುತ್ತದೆ. ಅದು ಸಹಜ ಸ್ಥಿತಿಗೆ ಬರಲು ತುಂಬಾ ಸಮಯ ಬೇಕಾಗುತ್ತದೆ. ಗುಣಮುಖರಾದ ರೋಗಿ ಈ ಅವಧಿಯಲ್ಲಿ ಮುಜುಗುರದಲ್ಲಿ ದಿನದೂಡುತ್ತಾರೆ. ವಿಗ್‌ ಧರಿಸುವುದರಿಂದ ಮುಜುಗುರವನ್ನುಇಲ್ಲದಾಗಿಸಬಹುದು. ವಿಗ್‌ ತಯಾರಿಸಲು ಕೂದಲು ಬೇಕು. ಇದಕ್ಕಾಗಿ ಕೂದಲು ಸಂಗ್ರಹಿಸಲು ಶಕ್ತಿ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳ ಆಸಕ್ತಿ, ಕಾಳಜಿವಹಿಸಿರುವುದು ಅಭಿನಂದನೀಯಕಾರ್ಯ ಎಂದು ಹೇಳಿದರು.

ಮುಳಿಯ ಫೌಂಡೇಶನ್‌ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅತಿಥಿಯಾಗಿ ಮಾತನಾಡಿ ಪುತ್ತೂರಿನ 9 ವಿದ್ಯಾರ್ಥಿಗಳು 2020ರಲ್ಲಿ ಆದ್ಯಾ ಸುಲೋಚನಾ ನೇತೃತ್ವದಲ್ಲಿ ಸೀಡ್ಸ್ ಆಫ್ ಹೋಪ್ ಸಂಸ್ಥೆಯನ್ನು ಪ್ರಾರಂಭಿಸಿತು. ಇಂದು 14 ಮಂದಿ ಸದಸ್ಯರು ಸಕ್ರಿಯವಾಗಿ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪುತ್ತೂರು ಮತ್ತು ಕಾರ್ಕಳದಲ್ಲಿ ಶಿಬಿರ ಆಯೋಜಿಸಿ 300 ಮಂದಿಯಿಂದ ಕೂದಲು ಸಂಗ್ರಹ ಮಾಡಿ 15 ವಿಗ್ ವಿತರಿಸಿರುತ್ತಾರೆ. ಪ್ರತಿ ವಿಗ್‌ ತಯಾರಿಸಲು 8 ರಿಂದ 10 ಸಾವಿರ ವೆಚ್ಚವಾಗುತ್ತದೆ. ಇದು ಕ್ಯಾನ್ಸರ್ ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ಎಜ್ಯುಕೇಶನ್‌ ಟ್ರಸ್ಟ್ನ ಪ್ರಧಾನ ಸಲಹೆಗಾರ ಹಾಗೂ ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ ಕೆ. ಮಾತನಾಡಿ ವಿದ್ಯಾರ್ಥಿಗಳು ಸಮಾಜದ ಬಗ್ಗೆ ಕಾಳಜಿವಹಿಸಿಕೊಂಡು ಬರುತ್ತಿರುವುದು ಸ್ವಾತಂತ್ರ್ಯ ಪೂರ್ವದಿಂದಲೇ ಭಾರತದಲ್ಲಿ ನಡೆಯುತ್ತಿದೆ. ನಿಜವಾದ ಸಮಾಜಕಾರ್ಯ ಮಾಡಬೇಕೆಂಬ ನಿಸ್ವಾರ್ಥಗುಣ ವಿದ್ಯಾರ್ಥಿಗಳಲ್ಲಿರುವುದರಿಂದ ಇಂತಹ “ಕೇಶದಾನ” ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. ಶಕ್ತಿ ಶಿಕ್ಷಣ ಸಂಸ್ಥೆ ಎಂದಿಗೂ ಇಂತಹಕಾರ್ಯಕ್ಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಸಹಕಾರವನ್ನು ನೀಡುತ್ತದೆ ಎಂದು ಅಧ್ಯಕ್ಷ  ನುಡಿಯಲ್ಲಿ ತಿಳಿಸಿದರು.

ಶಕ್ತಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಮೌನತನ್ನಕೂದಲುದಾನ ಮಾಡಿ ಮಾತನಾಡಿ ಈ ವರೆಗೆ ನಾನೇನಾದರೂ ಖರ್ಚು ಮಾಡಿದ್ದರೆ ಅದೆಲ್ಲವೂ ಪಾಲಕರ ಸಂಪಾದನೆ. ಇವತ್ತು ನನ್ನದೇ ತಲೆಯಲ್ಲಿ ಬೆಳೆದ ಕೂದಲನ್ನು ಮನತುಂಬಿ ದಾನ ಮಾಡಿದ್ದೇನೆ. ಕೂದಲು ಸೌಂದರ್ಯಕ್ಕಾಗಿ ಮಾತ್ರ ಇರುವುದು. ದಾನ ಮಾಡಿದ ಕೂದಲು ಮತ್ತೆ ಬೆಳೆಯುತ್ತದೆ. ಆದ್ದರಿಂದ ಇದರಲ್ಲಿ ಕಳೆದು ಕೊಳ್ಳುವಂತ್ತದ್ದು ಏನೂ ಇಲ್ಲಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಜೆಸಿಐ ಮಂಗಳೂರು ಸ್ಪೂರ್ತಿಯ ಅಧ್ಯಕ್ಷರಾದ ಸುಮನಾ ಪೊಳಲಿ, ಮಂಗಳೂರು ಬ್ಯೂಟಿಷಿಯನ್ ಸಂಸ್ಥೆಯ ಅಧ್ಯಕ್ಷರಾದ ಬಬಿತಾ ಶೆಟ್ಟಿ, ಇನ್ನರ್ ವೀಲ್ ಮಂಗಳೂರು ದಕ್ಷಿಣ ಅಧ್ಯಕ್ಷರಾದ ಶೀತಲ್ ಕರ್ಕೇರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿಒಟ್ಟು 65ಕ್ಕಿಂತಲೂ ಹೆಚ್ಚು ಜನರು ಕೂದಲುದಾನ ಮಾಡಿದರು. ಮಂಗಳೂರಿನ ಬ್ಯೂಟಿಷಿಯನ್ ಸಂಸ್ಥೆಯ ಪದಾಧಿಕಾರಿಗಳು ಹೇರ್‌ಕಟ್ಟಿಂಗ್ ನಡೆಸಿದರು. ಇದೆ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲೆಯನ್ನುಆಯೋಜಿಸಲಾಗಿತ್ತು. ಸೀಡ್ಸ್ ಆಫ್ ಹೋಪ್‌ನ ಆದ್ಯ ಸುಲೋಚನಾ ಕನ್ಯಾ ಶೆಟ್ಟಿ, ಸೃಜನ್ ಕೃಷ್ಣ, ಶ್ರೀಲತ ನಾಯಕ್ ಮತ್ತು ಪ್ರದ್ಯುಮ್ನರಾವ್ ನೇತೃತ್ವವಹಿಸಿದರು.

ಕಾರ್ಯಕ್ರಮಕ್ಕೆ ಶಕ್ತಿ ಪದವಿ ಪೂರ್ವಕಾಲೇಜು, ಪದವಿ ಪೂರ್ವ ಪ್ರಾಚಾರ್ಯರ ಸಂಘ, ಮಂಗಳೂರು ವಿವಿ, ರೋಟರಿ, ರೆಡ್‌ಕ್ರಾಸ್, ಜೆಸಿಐ, ಮಂಗಳೂರು ಬೂಟಿಷಿಯನ್ ಸಂಸ್ಥೆ, ಸಹಕಾರ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು