Bengaluru 26°C
Ad

ಆರು ಗಂಟೆಯಲ್ಲಿ ಎನ್​ಎಸ್​ಇ ವಿಶ್ವದಾಖಲೆ : ಒಂದೇ ದಿನಕ್ಕೆ ಹೆಚ್ಚಿದ ಷೇರು ವಹಿವಾಟು

ಲೋಕಸಭಾ ಚುನಾವಣೆ ಹಿನ್ನಲೆ ನೆನ್ನೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಇಳಿಮುಕಗೊಂಡಿದ್ದ ಷೇರು ವಹಿವಾಟಿನಲ್ಲಿ ಹೆಚ್ಚಳ ಕಂಡಿದೆ.ಇವತ್ತು ಬೇರೆ ಬೇರೆ ವಲಯದ ಷೇರುಗಳಿಗೆ ಹೂಡಿಕೆ ಹರಿದುಬರುತ್ತಿದೆ.

ನವದೆಹಲಿ : ಲೋಕಸಭಾ ಚುನಾವಣೆ ಹಿನ್ನಲೆ ನೆನ್ನೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಇಳಿಮುಕಗೊಂಡಿದ್ದ ಷೇರು ವಹಿವಾಟಿನಲ್ಲಿ ಹೆಚ್ಚಳ ಕಂಡಿದೆ.ಇವತ್ತು ಬೇರೆ ಬೇರೆ ವಲಯದ ಷೇರುಗಳಿಗೆ ಹೂಡಿಕೆ ಹರಿದುಬರುತ್ತಿದೆ. ಇಂದು ಬುಧವಾರ ಭಾರೀ ಸಂಖ್ಯೆಯಲ್ಲಿ ಷೇರು ವಹಿವಾಟು ನಡೆದಿರುವುದು ತಿಳಿದುಬಂದಿದೆ. ಈ ಕುರಿದು ಎನ್​ಎಸ್​ಇ ಸಿಇಒ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಜೂನ್ 5, ಬುಧವಾರದಂದು ಮಾರುಕಟ್ಟೆ ಅವಧಿಯಲ್ಲಿ 28.55 ಕೋಟಿ ಟ್ರಾನ್ಸಾಕ್ಷನ್​ಗಳಾಗಿವೆ ಎಂದು ಸಿಇಒ ಆಶೀಶ್ ಚೌಹಾಣ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೂನ್ 5ರಂದು ಬೆಳಗ್ಗೆ 9:15ರಿಂದ 3:30ರವರೆಗೆ ಆರು ಗಂಟೆ 15 ನಿಮಿಷ ಕಾಲದಲ್ಲಿ ಎನ್​ಎಸ್​ಇ ವಿಶ್ವದಾಖಲೆಯ ಸಂಖ್ಯೆಯಲ್ಲಿ ವಹಿವಾಟುಗಳನ್ನು ನಿರ್ವಹಿಸಿದೆ. ಒಂದು ದಿನದಲ್ಲಿ 1,971 ಕೋಟಿ ಆರ್ಡರ್​ಗಳು, ಮತ್ತು 28.55 ಕೋಟಿ ಟ್ರೇಡ್​ಗಳನ್ನು ನಿರ್ವಹಣೆ ಮಾಡಲಾಗಿದೆ,’ ಎಂದು ಎನ್​ಎಸ್​ಇ ಸಿಇಒ ತಿಳಿಸಿದ್ದಾರೆ.

 

Ad
Ad
Nk Channel Final 21 09 2023
Ad