Bengaluru 21°C
Ad

ಪಾನ್ ಕಾರ್ಡ್​ಗೆ ಆಧಾರ್ ಲಿಂಕ್ : ‌ಮೇ 31 ಕೊನೆ ದಿನ

ಪಾನ್ ಕಾರ್ಡ್​ಗೆ ಆಧಾರ್ ರನ್ನು ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುತ್ತಾ ಬಂದಿದ್ದು, 31ಕ್ಕೆ ಕೊನೆ ದಿನವಾಗಿದೆ.

ನವದೆಹಲಿ: ಪಾನ್ ಕಾರ್ಡ್​ಗೆ ಆಧಾರ್ ರನ್ನು ಲಿಂಕ್ ಮಾಡಬೇಕೆಂದು ಆದಾಯ ತೆರಿಗೆ ಇಲಾಖೆ ಹೇಳುತ್ತಾ ಬಂದಿದ್ದು, 31ಕ್ಕೆ ಕೊನೆ ದಿನವಾಗಿದೆ.

ಅಷ್ಟರೊಳಗೆ ಲಿಂಕ್ ಮಾಡದೇ ಹೋದರೆ ಹೆಚ್ಚಿನ ಟಿಡಿಎಸ್ ಕಟ್ಟಬೇಕಾದೀತು. ಐಟಿ ಇಲಾಖೆ ಇಂದು ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದು, ಈ ಸಂಬಂಧ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಮೇ 31ರೊಳಗೆ ನಿಮ್ಮ ಪಾನ್ಅನ್ನು ಆಧಾರ್ ಜೊತೆ ಜೋಡಿಸಿದರೆ ಐಟಿ ಸೆಕ್ಷನ್ 206ಎಎ ಮತ್ತು 206ಸಿಸಿ ಅಡಿಯಲ್ಲಿ ಹೆಚ್ಚಿನ ಟ್ಯಾಕ್ಸ್ ಪಾವತಿಯನ್ನು ತಪ್ಪಿಸಬಹುದು.

ಆಧಾರ್​ಗೆ ಲಿಂಕ್ ಆಗದ ಪಾನ್ ನಂಬರ್ ನಿಷ್ಕ್ರಿಯವಾಗಿರುತ್ತದೆ. ಅಂದರೆ ಇದನ್ನು ಬಳಸಲು ಆಗುವುದಿಲ್ಲ. ಆಧಾರ್​ಗೆ ಲಿಂಕ್ ಮಾಡಿದಲ್ಲಿ ಮಾತ್ರವೇ ಪಾನ್ ಬಳಕೆಯೋಗ್ಯ ಎನಿಸುತ್ತದೆ. ಈಗ ಆಧಾರ್​ಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ.

ಉಚಿತವಾಗಿ ಮಾಡಲು ಇದ್ದ ಡೆಡ್​ಲೈನ್ ಬಹಳ ದಿನಗಳ ಹಿಂದೆಯೇ ಮುಗಿದುಹೋಗಿದೆ. ಈಗ ಶುಲ್ಕ ಪಾವತಿಸಿ ಆಧಾರ್​ಗೆ ಲಿಂಕ್ ಮಾಡುವ ಮೂಲಕ ಪಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು. 2017ರ ಜುಲೈ 1ರ ಬಳಿಕ ವಿತರಿಸಲಾದ ಎಲ್ಲಾ ಪಾನ್ ನಂಬರ್​ಗೆ ಆಟೊಮ್ಯಾಟಿಕ್ ಆಗಿ ಆಧಾರ್ ಜೋಡಣೆ ಆಗಿರುತ್ತದೆ.

ಆಧಾರ್ ದಾಖಲೆ ಹೊಂದಿದ್ದರೆ ಮಾತ್ರವೇ ಪಾನ್ ನಂಬರ್ ಅಲಾಟ್ ಮಾಡಲಾಗುತ್ತದೆ. ಆದರೆ, 2017ರ ಜುಲೈ ಒಂದಕ್ಕಿಂತ ಮುಂಚೆ ಪಾನ್ ಕಾರ್ಡ್ ಮಾಡಿಸುವಾಗ ಆಧಾರ್ ದಾಖಲೆ ಕಡ್ಡಾಯ ಇರಲಿಲ್ಲ. ಬೇರೆ ಬೇರೆ ದಾಖಲೆಗಳನ್ನು ನೀಡಿ ಪಾನ್ ಕಾರ್ಡ್ ಮಾಡಿಸಿದವರು ಹಲವರಿದ್ದರು.

ಆಧಾರ್​ಗೆ ಲಿಂಕ್ ಆಗದ ಪಾನ್ ನಿಷ್ಕ್ರಿಯಗೊಂಡಿರುತ್ತದೆ. ಕಾರ್ಡ್ ಇದ್ದೂ ಇಲ್ಲದಂತಾಗುತ್ತದೆ. ಆದಾಯ ತೆರಿಗೆ ಸೆಕ್ಷನ್ 206 ಪ್ರಕಾರ ಪಾನ್ ಕಾರ್ಡ್ ಇಲ್ಲದ ವಹಿವಾಟಿಗೆ ಶೇ. 20ರಷ್ಟು ಟಿಡಿಎಸ್ ತೆರಿಗೆ ಕಡಿತ ಆಗುತ್ತದೆ.

ನೀವು ಒಂದು ಲಕ್ಷ ರೂ ಆದಾಯ ಪಡೆದರೆ ಅದಕ್ಕೆ 20,000 ರೂ ತೆರಿಗೆಯನ್ನೇ ಪಾವಿತಸಬೇಕಾಗುತ್ತದೆ. ಹೀಗಾಗಿ, ನಿಮ್ಮ ಪಾನ್ ಅನ್ನು ಆಧಾರ್ ಜೊತೆ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು.

Ad
Ad
Nk Channel Final 21 09 2023
Ad