Showing 20 of 21626 articles • Page 106 of 1082
ಕ್ಯಾರೆಟ್ ಅತ್ಯಂತ ಬಹುಮುಖ ಮತ್ತು ಪೌಷ್ಟಿಕ ತರಕಾರಿಯಾಗಿದ್ದು, ಆರೋಗ್ಯ ಪ್ರಯೋಜನಗಳಿಂದ ತುಂಬಿದೆ.
ನಿವೃತ್ತ ಶಿಕ್ಷಕಿ, 86 ವರ್ಷದ ಕರಿಬಸಮ್ಮ, ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ₹10 ಲಕ್ಷ ದೇಣಿಗೆ ನೀಡಿದರು. ಅವರ ಕೊಡುಗೆಯನ್ನು ದೇಶಭಕ್ತಿ ಮತ್ತು ಸಶಸ್ತ್ರ ಪಡೆಗಳಿಗೆ ನೀಡಿದ ಕೃತಜ್ಞತೆಯ ಗಮನಾರ್ಹ ಕಾರ್ಯವೆಂದು ಪ್ರಶಂಸಿಸಲಾಗಿದೆ.
ಮಹೇಶ್ ಮರ್ಣೆ ಅಪರೂಪದ ಕಲಾವಿದ. ಅಶ್ವತ್ಥ ಎಲೆಯಲ್ಲಿ ಇವರು ಖ್ಯಾತನಾಮರ ಭಾವಚಿತ್ರಗಳನ್ನು ಮೂಡಿಸಿ ಹೆಸರು ಮಾಡಿದ್ದಾರೆ. ಅದೇ ರೀತಿ ವಿವಿಧ ಸಂದರ್ಭಗಳಲ್ಲಿ ಕಲೆಯ ಮೂಲಕ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
ಕಾಡಬೆಟ್ಟುವಿನ ಅತ್ಯಂತ ಪುರಾತನ ಇತಿಹಾಸ ಪ್ರಸಿದ್ಧ ಶ್ರೀ ಅಬ್ಬರದರಗ ವೀರಭದ್ರ ಸಹಪರಿವಾರ ಹಾಗೂ ಶ್ರೀ ಶನೈಶ್ಚರ ದೇವಸ್ಥಾನದ ಜೀಣೋರ್ದ್ಧಾರ ಅಂಗವಾಗಿ ಜೂನ್ 27ರಂದು ಶನಿವಾರ ತ್ರಯೋದಶಿ ತಿಥಿಯ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷವಾಗಿ ನವಗ್ರಹ ಸಹಿತ ಸಾಮೂಹಿಕ ಶ್ರೀ ಶನಿಶಾಂತಿ ಹೋಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ತಂತ್ರಿ, ಹಿರಿಯ ವಿದ್ವಾಂಸ ಕುಮಾರಗುರು ತಂತ್ರಿ ತಿಳಿಸಿದರು
ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಜೂನ್ 23 ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಬಳಿಕ ಆಕೆ ಗರ್ಭಿಣಿಯಾಗಿ ಕೊನೆಗೆ ಆತ್ಮಹತ್ಯೆ ಮಾಡಿ ಕೊಂಡಿರುವ ಪ್ರಕರಣದಲ್ಲಿ ಡ್ರಗ್ಸ್ ಕೂಡಾ ಕೆಲಸ ಮಾಡಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.
ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA)ಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಲ್ಲವ ಅಭಿವೃದ್ಧಿ ನಿಗಮಕ್ಕೆ ಐನೂರು ಕೋಟಿ ಅನುದಾನವನ್ನು ನೀಡುವುದಾಗಿ ಈಗಿನ ಸರ್ಕಾರ ಭರವಸೆ ನೀಡಿದರೂ ಚಿಕ್ಕಾಸೂ ನೀಡಿಲ್ಲ, ಈ ಸರ್ಕಾರದ ನಡೆಯನ್ನು ಕಳೆದ ಮೂರು ವರ್ಷಗಳಿಂದ ನೋಡಿದ್ದು, ನೀಡಿದ ಭರವಸೆ ಈಡೇರಿಕೆಗಾಗಿ ಕಾದಿದ್ದೇವೆ. ಇನ್ನೂ ಭರವಸೆ ಈಡೇರದಿದ್ದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಎಚ್ಚರಿಸಿದೆ.
ಕಳವು ಪ್ರಕರಣದಲ್ಲಿ ಸುಮಾರು ಒಂದು ದಶಕದಿಂದ ತಲೆಮರೆಸಿಕೊಂಡು ನ್ಯಾಯಾಲಯದ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ತನ್ನ ಶತಮಾನೋತ್ಸವದ ಪಯಣದಲ್ಲಿಯೂ ಅನೇಕ ಟೀಕೆ, ಪ್ರಶ್ನೆಗಳು ಹಾಗೂ ಎರಡು ಬಾರಿ ನಿಷೇಧದಂತಹ ಸವಾಲುಗಳನ್ನು ಎದುರಿಸಿದ್ದರೂ, ತನ್ನ ಕಾರ್ಯಸೂಚಿಗಳನ್ನು ಮುಂದುವರಿಸಿಕೊಂಡು ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ ಎಂದು ಹಿಂದೂ ಸಂಘಟನೆಯ ನಾಯಕ ಸತ್ಯಜಿತ್ ಸುರತ್ಕಲ್ ಹೇಳಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಇದೀಗ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸಚಿವ ಯು ಟಿ ಖಾದರ್ ಅವರಿಗೆ 4 ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ.
ಮುಡಿಪು ಎಂಬಲ್ಲಿ ವೃದ್ಧ ಓರ್ವರು ಮುಖ್ಯ ರಸ್ತೆ ಬದಿಯಲ್ಲಿ ನಡೆದು ಕೊಂಡು ಹೋಗೋ ಸಂದರ್ಭ ಆಟೋ ಒಂದು ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗೋ ವೃದ್ಧ ಮೇಲೆ ಬಿದ್ದ ಪರಿಣಾಮ ಗಂಭೀರ ಗಾಯವಾಗಿದ್ದು , ಆಟೋ ಚಾಲಕನಿಗೂ ಗಾಯವಾದ ಬಗ್ಗೆ ವರದಿಯಾಗಿದೆ.
ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಮೃತಪಟ್ಟ ತಂದೆಯ ಮರಣ ಪ್ರಮಾಣ ಪತ್ರವನ್ನು ಕೇಳಿದ ಮಗನಿಗೂ ಮರಣ ಪತ್ರವನ್ನು ನೀಡಿ, ಮೈಸೂರು ಮಹಾನಗರ ಪಾಲಿಕೆ ಬಾರಿ ಎಡವಟ್ಟು ಮಾಡಿಕೊಂಡಿದೆ.
ಮುಂಗಾರು ಕೈ ಕೊಟ್ಟ ಪರಿಣಾಮವಾಗಿ ಕಪಿಲಾ ನದಿಯ ಒಡಲು ಬರಿದಾಗಿದ್ದು ನೀರಿನ ಹರಿವು ತೀವ್ರ ಇಳಿಮುಖವಾದ ಹಿನ್ನಲೆ ಕಪಿಲೆ ಸೊರಗಿದ್ದಾಳೆ.
ದಕ್ಷಿಣಕಾಶಿ ನಂಜನಗೂಡಿನ ಜನತೆಗೆ ಕುಡಿಯುವ ನೀರಿಗೆ ಸಂಕಷ್ಟ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಶಾಲೆ ಸಿಮೆಂಟ್ ಸ್ಟೇಜ್ ಕುಸಿದು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾಗಿರುವ ಘಟನೆ ಚಿತ್ರದುರ್ಗದ ಹೊರಪೇಟೆ ಕ್ರೇಸೆಂಟ್ ಶಾಲೆಯಲ್ಲಿ ನಡೆದಿದೆ.
ಉಡುಪಿ ಯಕ್ಷಗಾನ ಕಲಾರಂಗದ ‘ವಿದ್ಯಾಪೋಷಕ್’ ಯೋಜನೆಯಡಿಯಲ್ಲಿ 100ರ ಮನೆ ಹಸ್ತಾಂತರ ಹಾಗೂ ಸೂರು ನೂರರ ಸಡಗರ ಕಾರ್ಯಕ್ರಮವನ್ನು ಜೂ. 28ರಂದು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಮೈಸೂರು ಪಬ್ನಲ್ಲಿ ಇತ್ತೀಚೆಗೆ ಸಂಭವಿಸಿದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಉಡುಪಿ ಅಬಕಾರಿ ಇಲಾಖೆಯ ವತಿಯಿಂದ ಜಿಲ್ಲೆಯ ಎಲ್ಲ ಸನ್ನದುದಾರರು ಹಾಗೂ ಬಾರ್ ಮಾಲಕರಿಗೆ ಅಗ್ನಿ ಅವಘಡ ಸಂಭವಿಸ ದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಯಾಗಾರವನ್ನು ಉಡುಪಿ ಅಬಕಾರಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಸಹಕಾರಿ ಸಂಘಗಳ ವ್ಯವಹಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತರಬೇತಿ ಅಗತ್ಯ. ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಜಿಲ್ಲೆಯಲ್ಲಿ ಎಲ್ಲಾ ವಗದ ಸಹಕಾರಿಗಳಿಗೆ ನಿರಂತರ ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ಹಾಗೂ ಪರ್ಯಾಯ ಶಿರೂರು ಮಠ ಇದರ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 90ರಷ್ಟು ಅಂಕ ಗಳಿಸಿದ ಪ್ರತಿಭಾನ್ವಿತ ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಜೂ. 26ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ತಿಳಿಸಿದ್ದಾರೆ.