ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವಾಟ್ಸಪ್ಗಳ ಮೂಲಕ ಹರಿಬಿಟ್ಟ ಆರೋಪದ ಮೇಲೆ ಜೆಡಿಎಸ್ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.
ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಹರಿಬಿಟ್ಟವರನ್ನು ಕೊನೆಗೂ ಎಸ್ಐಟಿ ಬಂಧಿಸಿದೆ. ಇಂದು(ಮೇ 28) ಹೈಕೋರ್ಟ್ಗೆ ಬಂದಿದ್ದ ಆರೋಪಿಗಳಾದ ನವೀನ್ ಗೌಡ, ಚೇತನ್ನನ್ನು ಎಸ್ಐಟಿ ಬಂಧಿಸಿದೆ.
ವಿಡಿಯೋ ವೈರಲ್ ಮಾಡಿದ್ದವರನ್ನು ಬಂಧಿಸದಕ್ಕೆ ಎಚ್ಡಿ ಕುಮಾರಸ್ವಾಮಿ ಅವರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೂರು ದಾಖಲಾದ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳ ಬಂಧನವಾಗಿದೆ.
Ad