ಯಾದಗಿರಿ : ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ.
ಮಕ್ಕಳ ಪಾಲಿಗೆ ಕೃಷಿ ಹೊಂಡ ಮೃತ್ಯು ಕೂಪವಾಗಿದೆ. ಕಿರಣ (6), ಬಸಮ್ಮ (11), ಶರತ್ (6), ಹನುಮೇಶ್ (7) ಸಾವನ್ನಪ್ಪಿದ ಮಕ್ಕಳು. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ಈಜಲು ಹೋಗಿದ್ದರು. ಸಂಬಂಧಿಕರ ಆಕ್ರಂದನ ಮುಗಿಲ ಮುಟ್ಟಿದೆ.
ಮಕ್ಕಳನ್ನು ಕಳೆದುಕೊಂಡು ಪಾಲಕರು ಆಘಾತಗೊಂಡಿದ್ದಾರೆ. ಎಳೆಯ ಕಂದಮ್ಮಗಳ ಸಾವು ನೋಡಿ ಹೆತ್ತವರು ಕಣ್ಣೀರು ಇಡುತ್ತಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

