ಉತ್ತರ ಪ್ರದೇಶ: ಗೋರಖ್‌ಪುರದ ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆವಾಸ್ ವಿಕಾಸ್ ಕಾಲೋನಿ ಸಮೀಪದ ಗೋಡ್‌ಧೋಯಿಯಾ ಸೇತುವೆಯ ಬಳಿಯಿದ್ದ ಹಜರತ್ ಬಾಬಾ ಜಾಫರ್ ಅಲಿ ಶಾ ‘ಮಾಸೂಮ್’ ಅವರ ಮಜಾರ್ ಅನ್ನು ಜಿಲ್ಲಾಡಳಿತವು ಬುಲ್ಡೋಜರ್ ಬಳಸಿ ತೆರವುಗೊಳಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾದ ‘ಗೋಡ್‌ಧೋಯಿಯಾ ನಾಲಾ ಅಗಲೀಕರಣ’ ಕಾರ್ಯಕ್ಕೆ ಈ ಮಜಾರ್ ಅಡ್ಡಿಯಾಗಿತ್ತು ಎನ್ನಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಈ ಕಾರ್ಯಾಚರಣೆ ನಡೆದಿದ್ದು, ಅಭಿವೃದ್ಧಿ ಕಾರ್ಯಗಳಿಗಾಗಿ ಅಕ್ರಮ ಅಥವಾ ಅಡ್ಡಿಯಾಗುವ ಕಟ್ಟಡಗಳನ್ನು ತೆರವುಗೊಳಿಸುವ ಸರ್ಕಾರದ ಪಟ್ಟು ಮುಂದುವರಿದಿದೆ.

