ವಾಷಿಂಗ್ಟನ್: ಮೆಟಾ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತು ಇನ್ ಸ್ಟಾ ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಾರ್ಷಲ್ ಆರ್ಟ್ ತರಬೇತಿ ವೇಳೆ ಮೊಣಕಾಲಿಗೆ ಪೆಟ್ಟಾಯಿತು.
ಹಾಗಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ. ಇದೀಗ ಶಸ್ತ್ರಚಿಕಿತ್ಸೆ ಬಳಿಕೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ನಡುವೆ ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಮತ್ತು ಝುಕರ್ಬರ್ಗ್ ನಡುವೆ ವಾಗ್ಯುದ್ದ ಮುಂದುವರಿದಿದೆ. ಎಕ್ಸ್ ಖಾತೆಯಲ್ಲಿ ಡಾಗಿ ಡಿಸೈನರ್ ಎಂಬ ಖಾತೆಯಲ್ಲಿ ಇನ್ಸ್ಟಾಗ್ರಾಂ ಮತ್ತು ಓನ್ಲಿಫ್ಯಾನ್ಸ್ ನಡುವೆ ಏನು ವ್ಯತ್ಯಾಸ ಎಂದು ಪ್ರಶ್ನಿಸಿದ್ದಕ್ಕೆ ಬಹುಮಟ್ಟಿಗೆ ಮಸ್ಕ್ ಎರಡೂ ಒಂದೇ ಎಂದು ವ್ಯಂಗ್ಯವಾಡಿದ್ದಾರೆ.