News Karnataka Kannada
Tuesday, May 07 2024
ವಿದೇಶ

ಟೋಕಿಯೋ: ಯೂಟ್ಯೂಬ್ ನೋಡಿ ಗನ್ ತಯಾರಿಕೆ ಕಲಿತಿದ್ದ ಆರೋಪಿಯಿಂದ ಜಪಾನ್ ಮಾಜಿ ಪ್ರಧಾನಿ ಹತ್ಯೆ

Japan Ex Precident Sg
Photo Credit :

ಟೋಕಿಯೋ: ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡಿಕ್ಕಿ ಕೊಂದ  ಹಂತಕ  ಯೂಟ್ಯೂಬ್ ನಲ್ಲಿ ಗನ್ ತಯಾರಿಕೆಯ ವಿಡಿಯೋಗಳನ್ನು ನೋಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನಿಖಾ ಮೂಲಗಳು ಹೇಳುವಂತೆ ಬಂದೂಕುಧಾರಿ ಟೆಟ್ಸುಯಾ ಯಮಗಾಮಿ ಶಿಂಜೋ ಅಬೆ ಹತ್ಯೆಗೂ ಮುನ್ನ ಯೂಟ್ಯೂಬ್ ನೋಡಿ ಬಂದೂಕು ತಯಾರಿಸಿದ್ದ.  ತಯಾರಿಸಿದ್ದ ಬಂದೂಕನ್ನು ಹಲವು ಬಾರಿ ಪರೀಕ್ಷೆ ಒಳಪಡಿಸಿದ್ದ. ತನ್ನ ಧಾರ್ಮಿಕ ಗುಂಪಿಗೆ ಸಂಪರ್ಕ ಹೊಂದಿದ ಕಟ್ಟಡದ ಆವರಣದಲ್ಲೇ ತಾನೇ ತಯಾರಿಸಿದ್ದ ಬಂದೂಕನ್ನ ಪರೀಕ್ಷಿಸಿದ್ದ.

ಮಾಜಿ ಪ್ರಧಾನಿ ಗೆ ಗುಂಡು ಹಾರಿಸಲು ಯಮಗಾಮಿ ಬಂದೂಕನ್ನು “ಒಂದೇ ಬಾರಿಗೆ ಆರು ಬುಲೆಟ್ ಗಳನ್ನು ಹಾರಿಸುವಂತೆ ವಿನ್ಯಾಸಗೊಳಿಸಿದ್ದ ಎನ್ನಲಾಗಿದೆ. ಈ ಆಯುಧವು ಎರಡು ಲೋಹದ ಪೈಪ್‌ಗಳನ್ನು ಟೇಪ್‌ನೊಂದಿಗೆ ಜೋಡಿಸಿ ತಯಾರಿಲಾಗಿತ್ತು ಮತ್ತು ಎರಡೂ ಬ್ಯಾರೆಲ್‌ಗಳಿಂದ ಹಾರಿಸಲಾದ ಸಣ್ಣ ಪ್ಲಾಸ್ಟಿಕ್ ಶೆಲ್‌ಗಳಲ್ಲಿ ಇರಿಸಲಾದ ಬುಲೆಟ್  ಈ ಗನ್ ಗೆ ಬಳಸಲಾಗಿತ್ತು. ಒಂದು ರೀತಿಯಲ್ಲಿ ಈ ಗನ್ ಶಾಟ್‌ಗನ್‌ಗೆ ಹೋಲುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹತ್ಯೆಯ ನಂತರ, ಪೊಲೀಸರು ಯಮಗಾಮಿಯ ಮನೆಯಲ್ಲಿ ಸ್ಫೋಟಕಗಳು ಮತ್ತು ಮನೆಯಲ್ಲಿ ತಯಾರಿಸಿದ ಅನೇಕ ಬಂದೂಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಹತ್ಯೆಯ ತನಿಖೆಯು ಮುಂದುವರೆದಿದ್ದು, ಹಂತಕ ಟೆಟ್ಸುಯಾ ಹತ್ಯೆಗೂ ಮುನ್ನ ಬಂದೂಕು ತಯಾರಿಸುವ ಕುರಿತ ಯೂಟ್ಯೂಬ್ ವಿಡಿಯೋಗಳನ್ನು ಪರಿಶೀಲಿಸಿದೆ ಎಂದು ಬಹಿರಂಗಪಡಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು