ಇಸ್ಲಮಾಬಾದ್: ಪಾಕಿಸ್ತಾನದ ಪಂಜಾಬ್ನ ಮಿಯಾನ್ವಾಲಿಯಲ್ಲಿರುವ ಪಾಕ್ ವಾಯುನೆಲೆಯ ಮೇಲೆ ಉಗ್ರರು ಹಲವಾರು ಆತ್ಮಾಹುತಿ ಬಾಂಬರ್ಗಳು ಸೇರಿದಂತೆ ಭಾರೀ ಶಸ್ತ್ರಸಜ್ಜಿತ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಿಂದ ಮೂವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿದೆ. ಭಯೋತ್ಪಾದಕರು ಪಾಕಿಸ್ತಾನ ವಾಯುನೆಲೆಯ ಭಾಗದಲ್ಲಿ ಸುತ್ತುವರಿದ್ದ ಗೋಡೆಗಳಿಗೆ ಏಣಿಯನ್ನು ಬಳಸಿ ಒಳಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಉಗ್ರರ ಈ ದಾಳಿಯಿಂದ ಪಾಕ್ ವಾಯುನೆಲೆಯಲ್ಲಿರುವ ಯುದ್ಧ ವಿಮಾನಗಳು ಕೂಡ ನಾಶವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಾಕ್ ಸೇನೆ, ಭಯೋತ್ಪಾದಕರು ದಾಳಿ ಮಾಡಿರುವುದು ನಿಜ, ಆದರೆ ಅವರ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದೆ. ಪಾಕಿಸ್ತಾನ ಸೇನೆ ಕೂಡ ಪ್ರತಿದಾಳಿ ನಡೆಸಿದ್ದು ಈ ವೇಳೆ ಮೂವರು ಉಗ್ರರು ಮೃತಪಟ್ಟಿದ್ದಾರೆ ಎಂದು ವರದಿಗಳು ಹೇಳಿವೆ.
Terrorists attacked PAF base Mianwali and is ongoing, Ya Allah khair!!#MianWalipic.twitter.com/plGJ0IwWLO
— Tehseen Qasim (@Tehseenqasim) November 4, 2023